ಚಿಕ್ಕಮಗಳೂರು: ದತ್ತಜಯಂತಿ ಆಚರಣೆ ಹಿನ್ನೆಲೆಯಲ್ಲಿ ಇಂದಿನಿಂದ 6 ದಿನಗಳ ಕಾಲ ಮುಳ್ಳಯ್ಯನಗಿರಿಗೆ ಪ್ರವೇಶ ಕೂಡ ಬಂದ್ ಮಾಡಲಾಗುತ್ತಿದೆ.
ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರಗೆ ನಿರ್ಬಂಧ ಹೇರಲಾಗಿದೆ.
ಇಂದಿನಿಂದ ಡಿಸೆಂಬರ್ 27ರ ಬುಧವಾರ ಸಂಜೆವರೆಗೆ ಎಲ್ಲಾ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ಹೇರಲಾಗುತ್ತಿದೆ. ಹೋಂಸ್ಟೇ, ರೆಸಾರ್ಟ್ ಗೆ ಬುಕ್ ಮಾಡಿದ್ದರೆ ಬರಬಹುದು, ತೊಂದರೆ ಇಲ್ಲ. ಆದರೆ ಪ್ರವಾಸಿ ತಾಣಗಳಿಗೆ ಹೋಗುವಂತಿಲ್ಲ, ಹೋಂ ಸ್ಟೇ, ರೆಸಾರ್ಟ್‍ನಲ್ಲೇ ಇರಬೇಕು.
ಚಂದ್ರದ್ರೋಣ ಪರ್ವತಗಳ ಸಾಲು ಒಂದು ವಾರ ಸಂಪೂರ್ಣ ಬಂದ್ ಹಾಗೂ ದತ್ತಜಯಂತಿಯ ಕಡೇ ದಿನ 5 ತಾಲೂಕುಗಳಾದ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರಗಳಲ್ಲಿ ಎಣ್ಣೆ ಬಂದ್ ಮಾಡಲಾಗುತ್ತಿದೆ.
ಚಂದ್ರದ್ರೋಣ ಪರ್ವತದ ಸಾಲಿನ ತಾಣಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಿರುವುದರಿಂದ ಕೊರೊನಾ ಆತಂಕದ ನಡುವೆ ಕಾಫಿನಾಡಿನ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಚಂದ್ರದ್ರೋಣ ಪರ್ವತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ಪ್ರವಾಸಿಗರು ಆಗಮಿಸುತ್ತಿದ್ದರು. ಇದರಿಂದ ಕೋವಿಡ್ ಆತಂಕ ಹೆಚ್ಚಾಗಿತ್ತು.










