ದಾವೂದ್ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿದವರಿಗೆ 25 ಲಕ್ಷ ಬಹುಮಾನ – ಎನ್ಐಎ ಘೋಷಣೆ…

46
firstsuddi

ನವದೆಹಲಿ : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿದವರಿಗೆ 25 ಲಕ್ಷ ರೂ. ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಘೋಷಿಸಿದೆ. ಈಗಾಗಲೇ 2003ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಆತನ ತಲೆಗೆ 25 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಿತ್ತು.

ಎನ್ ಐಎ ಇಬ್ರಾಹಿಂನ ಸಹೋದರ ಅನೀಸ್ ಇಬ್ರಾಹಿಂ ಅಲಿಯಾಸ್ ಹಾಜಿ ಅನೀಸ್ ಹಾಗೂ ಆತನ ಸಹಾಯಕರಾದ ಛೋಟಾ ಶಕೀಲ್, ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ, ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್ ನ ಸುಳಿವು ನೀಡಿದವರಿಗೆ ಬಹುಮಾನವನ್ನು ಘೋಷಿಸಿದೆ. ಇಬ್ರಾಹಿಂ ತಲೆಗೆ 25 ಲಕ್ಷ, ಛೋಟಾ ಶಕೀಲ್ ಸುಳಿವು ನೀಡಿದವರಿಗೆ 20 ಲಕ್ಷ, ಅನೀಸ್, ಚಿಕ್ನಾ ಹಾಗೂ ಮೆಮನ್ ಸುಳಿವು ನೀಡಿದವರಿಗೆ ತಲಾ 15 ಲಕ್ಷ ನಗದನ್ನು ಸಂಸ್ಥೆ ಘೋಷಿಸಿದೆ.

ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ಮತ್ತು 1993ರ ಮುಂಬೈ ಸರಣಿ ಸ್ಫೋಟ ಸೇರಿದಂತೆ ಭಾರತದಲ್ಲಿ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ದಾವೂದ್ ಇಬ್ರಾಹಿಂ ತೊಡಗಿದ್ದ.