ದುಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು ಸಾವು…

229
firstsuddi

ಅಬುಧಾಬಿ : ಕ್ರಿಸ್ ಮಸ್ ದಿನದಂದು ದುಬೈನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ನಡೆದಿದ್ದು, ಕೇರಳ ಮೂಲದ ರೋಹಿತ್ ಕೃಷ್ಣಕುಮಾರ್(19) ಹಾಗೂ ಶರತ್ ಕುಮಾರ್(21) ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದ್ದು, ರೋಹಿತ್ ಕೃಷ್ಣಕುಮಾರ್ ಲಂಡನ್ ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಶರತ್ ಕುಮಾರ್ ಅಮೇರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕ್ರಿಸ್‍ಮಸ್ ರಜೆ ಕಳೆಯಲು ಇಬ್ಬರೂ ದುಬೈಯಲ್ಲಿ ಭೇಟಿಯಾಗಿದ್ದರು. ಬಳಿಕ ಶರತ್ ಅವರು ರೋಹಿತ್ ಅವರನ್ನು ತಮ್ಮ ಮನೆಗೆ ಬಿಡಲು ತೆರಳುತ್ತಿದ್ದಾಗ ಕಾರು ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದುಬೈ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ