ದುಷ್ಕರ್ಮಿಗಳಿಂದ ಜೀವ ಬೆದರಿಕೆ.. ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಿ : ಹರ್ಷ ಸಹೋದರಿ ಅಶ್ವಿನಿ.

42
firstsuddi

ಶಿವಮೊಗ್ಗ : ದುಷ್ಕರ್ಮಿಗಳಿಂದ ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಎಂದು ಹತ್ಯೆಯಾದ ಹಿಂದೂ ಕಾರ್ಯಕರ್ತ ಹರ್ಷ ಸಹೋದರಿ ಅಶ್ವಿನಿಯವರು ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

ನಿನ್ನೆ ರಾತ್ರಿ ಬೈಕ್ ನಲ್ಲಿ ಬಂದ ಮೂವರು ಮಚ್ಚು, ಲಾಂಗ್ ಝಳಪಿಸಿ ಜೀವ ಬೆದರಿಕೆ ಹಾಕಿದ್ದಾರೆ. ಹರ್ಷನ ತೆಗೆದಿದ್ದು ಸಾಲದಾ, ನಿಮ್ಮನ್ನೂ ತೆಗೆಯಬೇಕಾ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಅವಾಜ್ ಹಾಕಿದ್ದಾರೆ. ಈ ವೇಳೆ ಹರ್ಷನ ಸ್ನೇಹಿತರ ಹೆಸರನ್ನ ಕೂಗಿದ್ದಾರೆ ಎಂದು ಅಶ್ವಿನಿ ತಿಳಿಸಿದ್ದಾರೆ.

ಹರ್ಷ ಸತ್ತಾಗಲೇ ಒಂದಿಬ್ಬರನ್ನು ಎನ್ ಕೌಂಟರ್ ಮಾಡಿದ್ರೆ ಈ ರೀತಿಯ ಪ್ರಕರಣಗಳು ಪುನಾರ್ವತಿತ ಆಗುತ್ತಿರಲಿಲ್ಲ. ಅಪರಾಧ ಮಾಡಿ ಜೈಲಿನಲ್ಲಿ ವಿಲಾಸಿಯಾಗಿ ಬದುಕುಬಹುದು ಅಂತ ಅವರಿಗೆ ಗೊತ್ತಿದೆ. ಅವರಿಗೆ ಅಲ್ಲೇ ಎಲ್ಲಾ ಸಿಗುತ್ತೆ ಅಂತ ಗೊತ್ತಿದೆ. ಹಾಗಾಗಿ ಇಂತಹ ಕೃತ್ಯಗಳು ನಡೆಯುತ್ತಿವೆ. ಸೋದರ ಹರ್ಷ ನಿಧನದ ಬಳಿಕ ನಾವೇ ಹೊರಗಡೆ ಹೋಗುತ್ತಿದ್ದೇವೆ. ಹಾಗಾಗಿ ಸರ್ಕಾರ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡುವ ಬಗ್ಗೆ ಗಮನ ನೀಡಬೇಕು ಎಂದು ಅಶ್ವಿನಿ ಮನವಿ ಮಾಡಿಕೊಂಡರು.