ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ…

59
firstsuddi

ಬೆಂಗಳೂರು : ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಮಂಡಳಿ ಪ್ರಕಟ ಮಾಡಿದೆ. ಏಪ್ರಿಲ್ 22ರಿಂದ ಮೇ 18ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ.

ಇಲಾಖೆ ಈ ಹಿಂದೆ ಪ್ರಕಟಿಸಿದ್ದ ಪರೀಕ್ಷಾ ದಿನಗಳ ಸಮಯದಲ್ಲಿ ಜೆಇಇ ಮುಖ್ಯ ಪರೀಕ್ಷೆಗಳು ಇರುವುದರಿಂದ ಸಮಸ್ಯೆಯಾಗಿತ್ತು. ಇದೀಗ ಪರಿಷ್ಕೃತ ವೇಳಾಪಟ್ಟಿ ಪ್ರಕಟ ಮಾಡಿದೆ. ಈ ಹಿಂದೆ ವೇಳಾಪಟ್ಟಿಯ ಬಗ್ಗೆ ಅಕ್ಷೇಪಣೆ ಸಲಿಸಲು ಮಾರ್ಚ್ 5 ಸಂಜೆ 5 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿತ್ತು. ಸದ್ಯ ಯಾವುದೇ ಅಕ್ಷೇಪಣೆಗಳಿಲ್ಲದ ಕಾರಣ ದ್ವಿತೀಯ ಪಿಯು ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ.

ಅಂತಿಮ ವೇಳಾಪಟ್ಟಿ ಹೀಗಿದೆ :
ಏಪ್ರಿಲ್ 22 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏಪ್ರಿಲ್ 23 – ಗಣಿತ
ಏಪ್ರಿಲ್ 25 – ಅರ್ಥಶಾಸ್ತ್ರ
ಏಪ್ರಿಲ್ 26 – ಹಿಂದೂಸ್ತಾನಿ ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರ, ಮೂಲ ಗಣಿತ
ಏಪ್ರಿಲ್ 27 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಏಪ್ರಿಲ್ 28 – ಕನ್ನಡ, ಅರೇಬಿಕ್
ಮೇ 2 – ಭೂಗೋಳ, ಜೀವಶಾಸ್ತ್ರ
ಮೇ 5 -ಇಂಗ್ಲಿಷ್
ಮೇ 10 – ಇತಿಹಾಸ, ಭೌತಶಾಸ್ತ್ರ
ಮೇ 12 – ರಾಜ್ಯಶಾಸ್ತ್ರ, ಸ್ಟಾಟಸ್ಟಿಕ್ಸ್
ಮೇ 14 – ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮೇ 17 – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂವಿಜ್ಞಾನ, ಗೃಹ ವಿಜ್ಞಾನ
ಮೇ 18 – ಹಿಂದಿ