ನಕಲಿ ಕೀ ಬಳಸಿ ಪಕ್ಕದ ಮನೆಯಲ್ಲಿ ನಗದು, ಚಿನ್ನ ಕಳ್ಳತನ- ಕದ್ದ ಹಣದಲ್ಲಿ ಮಲೆ ಮಹದೇಶ್ವರನಿಗೆ ಪಾಲು…

38
firstsuddi

ಬೆಂಗಳೂರು: ನಕಲಿ ಕೀ ಬಳಸಿ ಪಕ್ಕದ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಹಣ ಕದ್ದು ಪರಾರಿಯಾಗಿದ್ದ ಖತರ್ನಾಕ್ ಗ್ಯಾಂಗನ್ನು ಕೆಂಪೇಗೌಡ ನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಕಿರಣ್, ಆನಂದ್ ಹಾಗೂ ನಾನಿ ಬಂಧಿತರು. ಆರೋಪಿಗಳು ಕಳೆದ ಮಾ.29ರಂದು ಚಾಮರಾಜಪೇಟೆಯ ಅಪ್ಪುರಾವ್ ರಸ್ತೆ ಉಮಾ ಎಂಬವರ ಮನೆಯಲ್ಲಿ ನಕಲಿ ಕೀ ಬಳಸಿ 6 ಲಕ್ಷ ನಗದು ಹಣ, 3 ಲಕ್ಷ 22 ಸಾವಿರ ಚಿನ್ನಾಭರಣ ಕದ್ದಿದ್ದರು. ಇನ್ನೂ ವಿಚಿತ್ರವೆಂದರೆ ಈ ಖದೀಮರು ಅಪರಿಚತರಲ್ಲ. ಸುಮಾರು ಹದಿನೈದು ವರ್ಷಗಳಿಂದಲೂ ಉಮಾ ಎಂಬಾಕೆಯ ಮನೆ ಹತ್ತಿರದಲ್ಲಿಯೇ ವಾಸವಾಗಿದ್ದರು. ಚಿನ್ನಾಭರಣ, ಹಣ ಕದ್ದ ಬಳಿಕ ನೇರವಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದಾರೆ. ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬೀಳದಿರಲಿ ಎಂಬ ಕಾರಣಕ್ಕೋ, ಮಾಡಿದ ಪಾಪದ ಕೆಲಸಕ್ಕೋ ಮಹದೇಶ್ವರ ಹುಂಡಿಗೆ ತಪ್ಪು ಕಾಣಿಕೆ ನೀಡಿದ್ದಾರೆ.

ಘಟನೆ ಸಂಬಂಧ ಉಮಾ ಅವರು ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಕೊನೆಗೂ ಖದೀಮರು ಸಿಕ್ಕಿಬಿದ್ದಿದ್ದಾರೆ. ಸದ್ಯ ಅರೋಪಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ಮುಂದುವರಿಸಿದ್ದಾರೆ.