ನಕಲಿ ಪಿಸ್ತೂಲ್ ಹಿಡಿದು ರೀಲ್ಸ್- ಇಬ್ಬರು ಯುವಕರ ವಿರುದ್ಧ ಎಫ್ಐಆರ್ ದಾಖಲು…

45
firstsuddi

ಕಲಬುರಗಿ: ನಕಲಿ ಪಿಸ್ತೂಲ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ, ಫೋಟೋ ಪೋಸ್ಟ್ ಮಾಡಿದ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಪಿಸ್ತೂಲ್ ಮಾದರಿಯ ಲೈಟರ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಡುವ ಮೂಲಕ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಸಿರುವ ಆರೋಪದ ಮೇಲೆ ಇಬ್ಬರು ಯುವಕರ ಮೇಲೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೇಡಂ ಪಟ್ಟಣದ ಇಂದಿರಾನಗರದ ನಿವಾಸಿಗಳಾದ ಮಹೇಶ ಹಾಗೂ ಬಸವರಾಜ ಎಂಬ ಯುವಕರು ಪಿಸ್ತೂಲ್ ಮಾದರಿಯ ಲೈಟರ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಗೂ ವಿಡಿಯೋ ಹರಿಬಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದು, ಅವರಿಂದ ನಕಲಿ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಇಬ್ಬರು ಯುವಕರ ವಿರುದ್ಧ ಎಫ್ಐಆರ್ ದಾಖಲಿಸಿ ಮುಂದೆ ಈ ರೀತಿಯಲ್ಲಿ ಹುಚ್ಚುಚ್ಚು ರೀಲ್ಸ್ ಮಾಡಿದ್ರೆ ಜೈಲೂಟ ಗ್ಯಾರಂಟಿ ಎಂದು ಪೊಲೀಸರು ಖಡಕ್ ಆಗಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.