ನವಜಾತ ಹೆಣ್ಣು ಶಿಶುವನ್ನು ನೀರಿನ ಹೊಂಡದಲ್ಲಿ ಎಸೆದು ಹೋಗಿರುವ ದುಷ್ಕರ್ಮಿಗಳು…

128
firstsuddi

ಹಾವೇರಿ : ನವಜಾತ ಹೆಣ್ಣು ಶಿಶುವನ್ನು ನೀರಿನ ಹೊಂಡದಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಜಿಲ್ಲೆಯ ಸವಣೂರು ಪಟ್ಟಣದ ಹೊರವಲಯದ ಇಸ್ಲಾಂಪುರದಲ್ಲಿ ನಡೆದಿದೆ. ನಿನ್ನೆ ಸಂಜೆ ತಾನೇ ಜನಸಿರುವ ಹೆಣ್ಣು ಮಗುವನ್ನು ದುಷ್ಕರ್ಮಿಗಳು ನೀರಿನ ಹೊಂಡದಲ್ಲಿ ಎಸೆದು ಹೋಗಿದ್ದು, ಮಗು ಉಸಿರುಗಟ್ಟಿ ಮೃತಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮಗುವನ್ನು ಹೊಂಡದಲ್ಲಿ ಎಸೆದು ಹೋಗಿರುವವರನ್ನು ಕೂಡಲೇ ಪತ್ತೆ ಹಚ್ಚಿ ತಕ್ಷ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.