ನಾಲ್ಕು ಬಾರಿ ಲಸಿಕೆ ಹಾಕಿಸಿಕೊಂಡಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್…

85
firstsuddi

ಇಂದೋರ್ : ವಿವಿಧ ದೇಶಗಳಲ್ಲಿ ನಾಲ್ಕು ಬಾರಿ ಲಸಿಕೆ ಹಾಕಿಸಿಕೊಂಡಿದ್ದ ಮಹಿಳೆ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.

44 ವರ್ಷದ ದುಬೈ ಮಹಿಳೆ 12 ದಿನಗಳ ಹಿಂದೆ ಮಧ್ಯಪ್ರದೇಶದ ಇಂದೋರ್ ಬಳಿಯ ಮೊವ್ ಪಟ್ಟಣಕ್ಕೆ ಹತ್ತಿರದ ಸಂಬಂಧಿಯೊಬ್ಬರ ಮದುವೆಗೆ ದುಬೈನಿಂದ ಆಗಮಿಸಿದ್ದರು. ಇಂದೋರ್ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತು. ಆಕೆಗೆ ಯಾವುದೇ ರೋಗ ಲಕ್ಷಣಗಳಿರಲಿಲ್ಲ. ವಿಚಿತ್ರವೆಂದರೆ ವಿಮಾನ ಹತ್ತುವ ಒಂದು ದಿನದ ಮೊದಲು ಆಕೆ ಕೊವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಳು. ಅದರ ವರದಿಯಲ್ಲಿ ಆಕೆಗೆ ಕೊರೊನಾ ನೆಗೆಟಿವ್ ಎಂದು ದಾಖಲಾಗಿತ್ತು.

ಕೋವಿಡ್ ಸೋಂಕಿತ ಮಹಿಳೆ ನಾಲ್ಕು ಬಾರಿ ಲಸಿಕೆಯನ್ನು ಹೇಗೆ ತೆಗೆದುಕೊಂಡರು? ಎಂಬ ವಿವರಗಳು ಲಭ್ಯವಾಗಿಲ್ಲ. ಈಗಾಗಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಂದೋರ್ ಸಿಎಂಎಚ್ಒ ಡಾ. ಭೂರೆ ಸಿಂಗ್ ಸೆಟಿಯಾ ಮಾಹಿತಿ ನೀಡಿದ್ದಾರೆ.