ನಾಳೆ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ…

54
firstsuddi

ಬೆಂಗಳೂರು : ನಾಳೆ ಬೆಂಗಳೂರಿನ 1, 2 ಮತ್ತು 3ನೇ ಹಂತದಿಂದ ನೀರು ಸರಬರಾಜು ಪ್ರದೇಶಗಳಲ್ಲಿ ಕಾವೇರಿ ನೀರು ಪೂರಕೈಯಲ್ಲಿ ವ್ಯತ್ಯಯವಾಗಲಿದೆ. ಪಂಪಿಂಗ್ ಸ್ಟೇಷನ್ ಗಳ ತುರ್ತು ದುರಸ್ತಿ ಹಾಗೂ ಕೆಪಿಟಿಸಿಎಲ್ ವತಿಯಿಂದ ವಿದ್ಯುತ್ ಸ್ಥಾವರಗಳ ತುರ್ತು ನಿರ್ವಹಣೆ ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕಾವೇರಿ ನೀರು ಪೂರೈಕೆ ಬಂದ್ ಆಗಲಿದೆ.

ಬೆಂಗಳೂರಿನ ಅರ್ಧ ಭಾಗದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಬೆಂಗಳೂರು ಜನತೆ ಸಹಕರಿಸಬೇಕೆಂದು ಜಲಮಂಡಳಿ ಮನವಿ ಮಾಡಿದೆ.

ಎಲ್ಲೆಲ್ಲಿ ಕಾವೇರಿ ನೀರು ಪೂರಕೈ ವ್ಯತ್ಯಯ?
ನೇತಾಜಿ ನಗರ, ಕೆಪಿ ಅಗ್ರಹಾರ, ಟಿಪ್ಪುನಗರ, ಚಾಮರಾಜಪೇಟೆ, ಆದರ್ಶ ನಗರ, ಪಾದಾರಾಯನಪುರ, ಬಿನ್ನಿ ಲೇಔಟ್, ವಿದ್ಯಾಪೀಠ, ವಿವೇಕಾನಂದ ನಗರ, ಎನ್.ಆರ್.ಕಾಲೋನಿ, ಬನಶಂಕರಿ ಮೊದಲ ಹಂತ, ಶ್ರೀನಗರ, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ, ಅಶೋಕ ನಗರ, ಶಾಂತಲಾನಗರ, ಇಸ್ರೋ ಲೇಔಟ್, ನೀಲಸಂದ್ರ, ಜಿ ರೋಡ್, ಬ್ರಿಗೇಡ್ ರೋಡ್, ಕೋರಮಂಗಲ, ಶಾಂತಿನಗರ, ನೇತಾಜಿ ನಗರ, ಕೆಪಿ ಅಗ್ರಹಾರ, ಬಿನ್ನಿ ಲೇಔಟ್, ರಾಘವೇಂದ್ರ ಕಾಲೋನಿ, ಅಂಜನಪ್ಪ ಗಾರ್ಡನ್, ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್ ಕಾಲೋನಿ, ಐಟಿಐ ಲೇಔಟ್, ವಿವೇಕಾನಂದ ನಗರ, ಕತ್ರಿಗುಪ್ಪೆ, ತ್ಯಾಗರಾಜ ನಗರ, ಶಾಸ್ತ್ರೀ ನಗರ, ಎನ್.ಆರ್ ಕಾಲೋನಿ, ಇಸ್ರೋ ಲೇಔಟ್, ಶ್ರೀನಗರ, ಕುಮಾರಸ್ವಾಮಿ ಲೇಔಟ್ ಕೆಲವು ಭಾಗಗಳು, ಕೋಡಿಹಳ್ಳಿ, ಆಡುಗೊಡಿ, ಜಯನಗರ, ಗಾಂಧಿಬಜಾರ್, ಜಯಮಹಲ್, ಇಂದಿರಾನಗರ, ಜೋಗುಪಾಳ್ಯ ಸೇರಿದಂತೆ ಹಲವು ಕಡೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.