ನೀರಿನ ಸಂಪಿಗೆ ಬಿದ್ದು ಮೂರು ವರ್ಷದ ಮಗು ಸಾವು…

209
firstsuddi

ಮೈಸೂರು : ನೀರಿನ ಸಂಪಿಗೆ ಬಿದ್ದು ಮೂರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಮೊತ್ತ ಗ್ರಾಮದಲ್ಲಿ ನಡೆದಿದೆ. ಛಾಯಾ(3) ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಮೃತ ಬಾಲಕಿ ಆಟವಾಡುತ್ತಿದ್ದ ವೇಳೆ ಗ್ರಾಮದ ಶಿವಲಿಂಗೇಗೌಡ ಎಂಬುವವರು ತಮ್ಮ ಮನೆಯ ನಿರ್ಮಾಣಕ್ಕೆಂದು ನಿರ್ಮಿಸಿದ್ದ ಸಂಪಿನಲ್ಲಿ ಬಿದ್ದು ನೀರಲ್ಲಿ ಮುಳುಗಿ ಮೃತಪಟ್ಟಿದೆ. ಮನೆಯ ಮಾಲೀಕ ಸಂಪ್ ನಿರ್ಮಿಸಿ ಸುರಕ್ಷತಾ ಕ್ರಮಕೈಗೊಂಡಿರಲಿಲ್ಲ. ಇದರಿಂದ ಮನೆಯ ಮಾಲೀಕನ ಬೇಜವಾಬ್ದಾರಿತನದಿಂದ ಮಗು ಮೃತಪಟ್ಟಿದೆ ಎಂದು ಮಗುವಿನ ಪೋಷಕರು ಆರೋಪಿಸಿದ್ದು, ಹೆಚ್.ಡಿ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.