ನೈಟ್ ಕರ್ಪ್ಯೂ ಉಲ್ಲಂಘಿಸಿ ನ್ಯೂ ಇಯರ್ ಪಾರ್ಟಿ – ಪ್ರಶ್ನಿಸಿದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ…

57
firstsuddi

ಚಿಕ್ಕಬಳ್ಳಾಪುರ : ನೈಟ್ ಕರ್ಪ್ಯೂ ಉಲ್ಲಂಘಿಸಿ ನ್ಯೂ ಇಯರ್ ಪಾರ್ಟಿ ಮಾಡಿದ ಹಿನ್ನೆಲೆ ಪ್ರಶ್ನಿಸಿದ ಪೊಲೀಸರ ಮೇಲೆಯೇ ಯುವಕರು ಹಲ್ಲೆಗೆ ಯತ್ನಿಸಿದ್ದಾರೆ.

ತಾಲೂಕಿನ ಅಗಲಗುರ್ಕಿ ಬಳಿ ಇರುವ ವೈಟ್ ನಿರ್ವಾಣ ಬೈ ಜಡೇ ರೆಸಾರ್ಟ್ ನಲ್ಲಿ ಯುವಕರ ತಂಡವೊಂದು ತಡರಾತ್ರಿ ಡಿಜೆ ಹಾಕಿ ಮದ್ಯದ ಪಾರ್ಟಿ ಮಾಡುತ್ತಿದ್ದರು. ಈ ಮಾಹಿತಿ ಆಧರಿಸಿ ಚಿಕ್ಕಬಳ್ಳಾಪುರ ಸಿಪಿಐ ಪ್ರಶಾಂತ್ ಹಾಗೂ ಮೂವರು ಸಿಬ್ಬಂದಿ ಭೇಟಿ ನೀಡಿದ್ದರು. ಪಾರ್ಟಿ ಬಗ್ಗೆ ಪ್ರಶ್ನಿಸಿದ ಪೊಲೀಸರ ಮೇಲೆಯೇ ಪಾನಮತ್ತ ಯುವಕರು ಹಲ್ಲೆಗೆ ಯತ್ನಿಸಿದ್ದಾರೆ. ವಿಷಯ ತಿಳಿದು ಎಸ್ ಪಿ ಹಾಗೂ ಡಿವೈಎಸ್ ಪಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಸದ್ಯ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕು ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.