ಪಣಂಬೂರು ಬೀಚ್ ಬಳಿ ಗಿಲ್ ನೆಟ್ ದೋಣಿ ಅಪಘಾತ ; ಓರ್ವ ಮೀನುಗಾರ ನಾಪತ್ತೆ…

64
firstsuddi

ಮಂಗಳೂರು : ಪಣಂಬೂರು ಬೀಚ್ ಬಳಿ ಗಿಲ್ ನೆಟ್ ದೋಣಿಯೊಂದು ಬಿರುಗಾಳಿಗೆ ಸಿಲುಕಿ ಓರ್ವ ಮೀನುಗಾರ ನಾಪತ್ತೆಯಾಗಿದ್ದಾನೆ.

ಕಸಬಾ ಬೆಂಗರೆ ನಿವಾಸಿ ಶರೀಫ್ ನಾಪತ್ತೆಯಾದ ಮೀನುಗಾರ. ಮೀನುಗಾರಿಕೆಗೆ ತೆರಳಿದ್ದ ಈ ತಂಡದ ಬೆಂಗರೆಯ ಅಝೀಝ್, ಇಮ್ತಿಯಾಝ್, ಸಿನಾನ್, ಫೈರೋಝ್ ಎಂಬುವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ನಾಪತ್ತೆಯಾಗಿರುವ ಮೀನುಗಾರ ಶರೀಫ್ ಗಾಗಿ ಶೋಧ ಕಾರ್ಯ ಮುಂದುವರಿದಿದೆ.