ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್.

107
firstsuddi

ಲಕ್ನೋ : ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಭಾರತದ ಬ್ಯಾಟ್ಸ್‌ಮ್ಯಾನ್‌ ಶ್ರೇಯಸ್ ಅಯ್ಯರ್ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ವಿಶೇಷ ಸಾಧನೆ ಮಾಡಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಆಕರ್ಷಕ ಶತಕ ಸಿಡಿಸಿ ದಾಖಲೆ ಬರೆದ ಭಾರತದ 16ನೇ ಆಟಗಾರ ಅಯ್ಯರ್ ಆಗಿದ್ದಾರೆ.

ಮೊದಲಿಗರಾಗಿ ರವೀಂದ್ರ ಜಡೇಜಾ 50 ರನ್ ಗೆ ಟಿಮ್ ಸೌದೀ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಉತ್ತಮ ಇನ್ನಿಂಗ್ಸ್ ಆಡುವಲ್ಲಿ ಮತ್ತೆ ಎಡವಿದ ವೃದ್ದಿಮಾನ್ ಸಾಹ ಆಟ ಕೇವಲ 1 ರನ್ಗೆ ಅಂತ್ಯವಾಯಿತು. ಶ್ರೇಯಸ್ ಅಯ್ಯರ್ 171 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ನೊಂದಿಗೆ 105 ರನ್ ಬಾರಿಸಿ ಔಟ್ ಆದರು. ಈ ಮೂಲಕ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ ಮೂರನೇ ಹಿರಿಯ ಆಟಗಾರ ಎನಿಸಿಕೊಂಡರು.