ಪರೀಕ್ಷಾ ಪೆ ಚರ್ಚಾ: ಆತ್ಮವಿಶ್ವಾಸ ಹೆಚ್ಚಿಸುವುದು, ಒತ್ತಡ ಕಡಿಮೆ ಮಾಡುವ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ.

41

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ವಾರ್ಷಿಕ ‘ಪರೀಕ್ಷಾ ಪೆ ಚರ್ಚಾ’ ಪ್ರಸಾರದ 8ನೇ ಆವೃತ್ತಿಯ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ನಡೆಸಿದ ಸಂವಾದದಲ್ಲಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು. ಈ ಬಾರಿ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ದೆಹಲಿಯ ಸುಂದರ್ ನರ್ಸರಿಯಲ್ಲಿ ಚಿತ್ರೀಕರಿಸಲಾಗಿದ್ದು, ಮೋದಿ ಸುಮಾರು 35 ವಿದ್ಯಾರ್ಥಿಗಳೊಂದಿಗೆ ಮುಕ್ತ ವಾತಾವರಣದಲ್ಲಿ ಸಂವಹನ ನಡೆಸಿದರು. ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಪರೀಕ್ಷೆಗಳು 2 ವಿಭಿನ್ನ ವಿಷಯಗಳು ಎಂದು ಹೇಳಿದ ಪ್ರಧಾನಿ ಮೋದಿ, ಮೋದಿ ಮಕ್ಕಳ ಬೆಳವಣಿಗೆಗಾಗಿ ಅವರನ್ನು ಹೊರಗೆ ಕರೆದುಕೊಂಡು ಹೋಗುವುದು ಮುಖ್ಯ. ಅವರನ್ನು ಪುಸ್ತಕಗಳ ಸೆರೆಮನೆಯಲ್ಲಿ ಬಂಧಿಸಬಾರದು ಎಂದು ಹೇಳಿದರು. ನಿಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ, ನಿಮ್ಮ ಜೀವನವನ್ನು ಸದುಪಯೋಗಪಡಿಸಿಕೊಳ್ಳಿ, ಈ ಕ್ಷಣ ನಿಮ್ಮದು ಎಂದು ಜೀವಿಸಿ. ಸಕಾರಾತ್ಮಕ ಅಂಶಗಳನ್ನು ಕಂಡುಕೊಳ್ಳಿ ಎಂದು ಪ್ರಧಾನಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪೋಷಕರು ತಮ್ಮ ಮಕ್ಕಳನ್ನು ಪ್ರದರ್ಶನ ಮಾದರಿಗಳಾಗಿ ಬಳಸಬಾರದು. ಅವರನ್ನು ಇತರರೊಂದಿಗೆ ಹೋಲಿಸಬಾರದು ಮತ್ತು ಬದಲಿಗೆ ಅವರನ್ನು ಬೆಂಬಲಿಸಬೇಕು ಎಂದು ಮೋದಿ ಹೇಳಿದರು. ದುರದೃಷ್ಟವಶಾತ್ ಯಾರಾದರೂ 10 ಮತ್ತು 12ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸದಿದ್ದರೆ, ಅವರ ಜೀವನ ಹಾಳಾಗುತ್ತದೆ ಎಂಬ ಸಾಮಾನ್ಯ ನಂಬಿಕೆ ಇದೆ. ನಮ್ಮ ಸಮಾಜವು ಕಡಿಮೆ ಅಂಕಗಳಿಗಾಗಿ ಮನೆಯಲ್ಲಿ ರಾದ್ಧಾಂತವನ್ನೇ ಸೃಷ್ಟಿಸುತ್ತದೆ. ನೀವು ಒತ್ತಡದಿಂದ ಹೊರಬರಬೇಕು. ಅದರ ಬಗ್ಗೆ ಚಿಂತಿಸದೆ ಸಿದ್ಧರಾಗಿ ಎಂದು ಪ್ರಧಾನಿ ಮೋದಿ ಹೇಳಿದರು.