ಪಾಕ್ ಗಡಿಯೊಳಗೆ ಬಿದ್ದ ಭಾರತದ ಕ್ಷಿಪಣಿ – ಆಕಸ್ಮಿಕವೇ ಹೊರತು ಬೇರೇನೂ ಇಲ್ಲ ಎಂದ ಅಮೆರಿಕ.

74
firstsuddi

ವಾಷಿಂಗ್ಟನ್ : ಇತ್ತೀಚೆಗೆ ಭಾರತೀಯ ಸೂಪರ್ ಸಾನಿಕ್ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ, ಪಾಕಿಸ್ತಾನದ ಗಡಿಯೊಳಗೆ ಬಂದು ಬಿದ್ದಿತ್ತು. ಭಾರತದಿಂದ ಪಾಕ್ ಗೆ ಕ್ಷಿಪಣಿ ಉಡಾವಣೆಯಾದ ಬಗ್ಗೆ ಅಮೆರಿಕ ಉತ್ತರಿಸಿದೆ.

ನಮ್ಮ ಭಾರತೀಯ ಪಾಲುದಾರರು ನಿಮಗೆ ಹೇಳಿರುವಂತೆ ಈ ಘಟನೆಯು ಆಕಸ್ಮಿಕವಲ್ಲದೆ ಬೇರೇನೂ ಅಲ್ಲ ಮತ್ತು ಇದರಲ್ಲಿ ಯಾವುದೇ ಸೂಚನೆ ಕೂಡ ಇಲ್ಲ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 9 ರಂದು ಭಾರತದ ಕ್ಷಿಪಣಿ ಪಾಕ್ ನಲ್ಲಿ ಪತನವಾಗಿತ್ತು. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತ ಸರ್ಕಾರ, ಇದು ಆಕಸ್ಮಿಕವಾಗಿ ಉಡಾವಣೆ ಆಗಿದೆ. ಅಷ್ಟೇ ಅಲ್ಲದೇ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಈ ಘಟನೆಯು ತನ್ನ ನಿತ್ಯದ ನಿರ್ವಹಣೆಯ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಉಂಟಾಗಿದೆ. ಈ ಘಟನೆ ಬಗ್ಗೆ ತನಿಖೆಗೆ ಭಾರತ ಆದೇಶಿದೆ ಎಂದು ಹೇಳಿದೆ.