ಪಾಟ್ನಾದಲ್ಲಿ ಒಮಿಕ್ರಾನ್ ಹೊಸ ರೂಪಾಂತರಿ ಬಿಎ.2.12 ಪತ್ತೆ…

62
firstsuddi

ಪಾಟ್ನಾ : ಪಾಟ್ನಾದಲ್ಲಿ ಒಮಿಕ್ರಾನ್ ನ ಹೊಸ ರೂಪಾಂತರ ತಳಿ ಬಿಎ.2.12 ಪತ್ತೆಯಾಗಿದ್ದು, ಇದು ಒಮಿಕ್ರಾನ್​​ಗಿಂತ 10 ಪಟ್ಟು ಹೆಚ್ಚು ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದೆ.

ಪಾಟ್ನಾದ ಇಂದಿರಾಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಬಿಹಾರದ ಆರೋಗ್ಯ ಇಲಾಖೆಯು ಹೊಸ ಓಮಿಕ್ರಾನ್ ರೂಪಾಂತರವನ್ನು ಪತ್ತೆ ಮಾಡಿದೆ. ಬಿಎ.2.12 ರೂಪಾಂತರವನ್ನು ಮೊದಲು ಅಮೆರಿಕದಲ್ಲಿ ಕಂಡುಹಿಡಿಯಲಾಯಿತು. ದೆಹಲಿಯಲ್ಲಿ ಈಗಾಗಲೇ ಐದು ಬಿಎ.2.12 ಪ್ರಕರಣಗಳು ಪತ್ತೆಯಾಗಿದ್ದು, ಈಗ ಪಾಟ್ನಾದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ.

ಸಂಭವನೀಯ ಹೊಸ ರೂಪಾಂತರಗಳ ಮೇಲೆ ಪತ್ತೆ ಹಚ್ಚಲು ಜೀನೋಮ್ ಪರೀಕ್ಷೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಈ ವೇಳೆ13 ಮಾದರಿಗಳನ್ನು ಪರೀಕ್ಷಿಸಲಾಯಿತು. ಅವುಗಳಲ್ಲಿ ಒಂದು ಬಿಎ.12 ತಳಿಗಳನ್ನು ಹೊಂದಿತ್ತು. ಉಳಿದ 12 ಮಾದರಿಗಳು ಬಿಎ.2 ತಳಿಗಳನ್ನು ಹೊಂದಿವೆ. ಈ ಹೊಸ ರೂಪಾಂತರದ ಪರಿಣಾಮ ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ. ಆದರೂ ಆತಂಕ ಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಅಗತ್ಯ ಎಂದು ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ.ನಮ್ರತಾ ಕುಮಾರಿ ತಿಳಿಸಿದ್ದಾರೆ.