ನವದೆಹಲಿ : ಪಾಸ್‍ಪೋರ್ಟ್‍ನಲ್ಲಿ ಯಾವುದೇ ಉಪನಾಮ ಇಲ್ಲದೇ (ಸರ್ ನೇಮ್) ಏಕನಾಮ ಇದ್ದರೆ ಅಂಥವರಿಗೆ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಯುಎಇ ಹೇಳಿದೆ.
ಭಾರತದಿಂದ ಅಥವಾ ಯುಎಇಯಿಂದ ಪ್ರಯಾಣಿಸುವ ಭಾರತೀಯ ಪ್ರಯಾಣಿಕರ ಪಾಸ್‍ಪೋರ್ಟ್‍ನಲ್ಲಿ ತಮ್ಮ ಹೆಸರಿನಲ್ಲಿ ಮೊದಲ ಮತ್ತು ಕೊನೆಯ ಹೆಸರಿರುವುದು ಕಡ್ಡಾಯವಾಗಿದೆ.
ಯುಎಇ ಅಧಿಕಾರಿಗಳ ಸೂಚನೆಗಳ ಪ್ರಕಾರ, 2022 ನವೆಂಬರ್ 21ರಿಂದ ಜಾರಿಗೆ ಬರುವಂತೆ ಪ್ರವಾಸಿ, ವಿಸಿಟಿಂಗ್ ಅಥವಾ ಇತರ ಯಾವುದೇ ರೀತಿಯ ವೀಸಾದಡಿ ಪ್ರಯಾಣಿಸುವವರು ತಮ್ಮ ಪಾಸ್‌ಪೋರ್ಟ್‌ಗಳಲ್ಲಿ ಮೊದಲ ಮತ್ತು ಕೊನೆಯ ಹೆಸರಿರದಿದ್ದರೆ ಆ ಪ್ರಯಾಣಿಕರಿಗೆ ಯುಎಇಗೆ ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ. ಹೀಗಾಗಿ, ಪಾಸ್‍ಪೋರ್ಟ್‍ನಲ್ಲಿ ಆ ರೀತಿಯ ದೋಷ ಇರುವವರು ಕೂಡಲೇ ಅದನ್ನು ಸರಿಪಡಿಸಬೇಕು ಎಂದು ಸೂಚನೆ ನೀಡಲಾಗಿದೆ.










