ಪಿಯು ಫಲಿತಾಂಶ ಪ್ರಕಟ : ಟಾಪರ್ ಗಳ ಪಟ್ಟಿ ಇಲ್ಲಿದೆ…

61
firstsuddi

ಬೆಂಗಳೂರು : 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಕಲಾ ವಿಭಾಗ:

ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದು ಪಿಯು ಕಾಲೇಜ್ ಮೊದಲ ಸ್ಥಾನದಲ್ಲಿದೆ. ಇದೇ ಕಾಲೇಜಿನ ಶ್ವೇತಾ ಭೀಮಾಶಂಕರ ಭೈರಗೊಂಡ, ಸಹನಾ ಮಡಿವಾಳರ ಈ ಇಬ್ಬರೂ ವಿದ್ಯಾರ್ಥಿಗಳು 600 ಅಂಕಗಳಿಗೆ 594 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ವಿಜ್ಞಾನ ವಿಭಾಗ:

ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಿಮ್ರಾನ್ ಶೇಷರಾವ್ 600 ಅಂಕಗಳಿಗೆ 598 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಿಮ್ರಾನ್ ಶೇಷರಾವ್ ಬೆಂಗಳೂರಿನ ಎನ್ ಎಂಕೆಆರ್ ವಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.

ವಾಣಿಜ್ಯ ವಿಭಾಗ:

ವಾಣಿಜ್ಯ ವಿಭಾಗದಲ್ಲಿ 4 ವಿದ್ಯಾರ್ಥಿಗಳು 600 ಅಂಕಗಳಿಗೆ 596 ಅಂಕ ಗಳಿಸಿ ಟಾಪರ್ಸ್ ಆಗಿದ್ದಾರೆ. ಬೆಂಗಳೂರಿನ ಜೈನ್ ಪಿಯು ಕಾಲೇಜಿನ ಮಾನವ ವಿನಯ್ ಕೇಜ್ರಿವಾಲ್, ಬೆಂಗಳೂರಿನ ಬಿಜಿಎಸ್ ಕಾಲೇಜಿನ ನೀಲು ಸಿಂಗ್, ಬೆಂಗಳೂರಿನ ಸೆಂಟ್ ಕ್ಲಾರಟ್ ಪಿಯು ಕಾಲೇಜಿನ ಆಕಾಶ್ ದಾಸ್ ಹಾಗೂ ಚಿಕ್ಕಬಳ್ಳಾಪುರ ಕಾಲೇಜಿನ ನೇಹಾ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.