ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ.. ಇಂದಿನ ದರ ಹೀಗಿದೆ…

64
firstsuddi

ನವದೆಹಲಿ : ಪೆಟ್ರೋಲ್, ಡೀಸೆಲ್ ದರ ಸತತ ಎರಡು ದಿನಗಳಿಂದ ಏರಿಕೆ ಕಂಡಿದ್ದು, ಇಂದು ಮತ್ತೆ 80 ಪೈಸೆ ಏರಿಕೆಯಾಗಿದೆ. ಈ ಹೊಸ ದರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬಂದಿವೆ.

ದೆಹಲಿಯಲ್ಲಿ 80 ಪೈಸೆ ಹೆಚ್ಚಳದ ಮೂಲಕ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 97.81 ರೂ ಏರಿಕೆಯಾಗಿದ್ದು, ಡೀಸೆಲ್ ಬೆಲೆ 89.07 ರೂಗೆ ದಾಟಿದೆ. ಮುಂಬೈನಲ್ಲಿ ಪೆಟ್ರೋಲ್ 80 ಪೈಸೆ, ಡೀಸೆಲ್ 85 ಪೈಸೆ ಏರಿಕೆಯಾಗಿದ್ದು, ಲೀಟರ್ ಪೆಟ್ರೋಲ್ 112.51 ಹಾಗೂ ಡೀಸೆಲ್ 96.70ಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 103.11 ರೂ. ಆಗಿದ್ದರೆ ಡೀಸೆಲ್ ಬೆಲೆ 87.37 ರೂ. ಆಗಿದೆ. ಚೆನ್ನೈನಲ್ಲಿ ಇಂಧನ ದರದಲ್ಲಿ 76 ಪೈಸೆ ಏರಿಕೆಯಾಗಿದೆ. ಈ ಮೂಲಕ ಲೀಟರ್ ಪೆಟ್ರೋಲ್ ಬೆಲೆ 103.67 ರೂಗೆ ತಲುಪಿದ್ದು, ಡೀಸೆಲ್ ಬೆಲೆ 93.71 ರೂಗೆ ಏರಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 84 ಪೈಸೆ ಏರಿಕೆಯೊಂದಿಗೆ 106.34 ರೂ ದಾಖಲಾಗಿದೆ. ಹಾಗೆಯೇ ಡೀಸೆಲ್ ಬೆಲೆಯಲ್ಲಿ 80 ಪೈಸೆ ಹೆಚ್ಚಳವಾಗಿದ್ದು 91.42 ರೂ ದಾಖಲಾಗಿದೆ.