ಪ್ಯಾಟ್ ಕಮಿನ್ಸ್ ತಾಯಿ ನಿಧನ – ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಆಸ್ಟ್ರೇಲಿಯಾ ಆಟಗಾರರು…

80
firstsuddi

ಅಹಮದಾಬಾದ್ : ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಾಯಿ ನಿಧನರಾಗಿದ್ದು, ಅವರಿಗೆ ಗೌರವ ಸೂಚಿಸುವ ಸಲುವಾಗಿ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಆಸ್ಟ್ರೇಲಿಯಾ ತಂಡದ ಆಟಗಾರರು ಮೈದಾನಕ್ಕೆ ಕಪ್ಪು ಪಟ್ಟಿ ಧರಿಸಿ ಇಳಿದಿದ್ದಾರೆ. ಮರಿಯಾ ಕಮಿನ್ಸ್ ಅವರ ಅಗಲಿಕೆಗೆ ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಸಂತಾಪ ಸೂಚಿಸಿವೆ.

ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪ್ಯಾಟ್ ಅವರ ತಾಯಿ ಮರಿಯಾ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ತಾಯಿಯ ಆರೋಗ್ಯ ತೀವ್ರ ಹದಗೆಟ್ಟ ವಿಷಯ ತಿಳಿಯುತ್ತಿದ್ದಂತೆ ಪ್ಯಾಟ್, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡದಿರಲು ನಿರ್ಧರಿಸಿ ತವರಿಗೆ ಮರಳಿದ್ದರು. ಇದರಿಂದಾಗಿ ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ತಂಡದ ಕ್ಯಾಪ್ಟನ್ ಸ್ಥಾನ ವಹಿಸಿದ್ದಾರೆ.

ಅಹಮದಾಬಾದ್ ನಲ್ಲಿ ನಿನ್ನೆಯಿಂದ ನಾಲ್ಕನೇ ಮತ್ತು ಸರಣಿಯ ಅಂತಿಮ ಟೆಸ್ಟ್ ಪ್ರಾರಂಭವಾಗಿದ್ದು, ಪ್ರಸ್ತುತ ಆಸಿಸ್ 167.2 ಓವರ್ ಗಳಿಗೆ ಆಲೌಟ್ ಆಗಿ 480 ರನ್ ಪೇರಿಸಿದೆ.