ಪ್ರತಿಯೊಬ್ಬರು ಉತ್ತಮ ಜೀವನ ಕೌಶಲ್ಯವನ್ನು ರೂಡಿಸಿಕೊಂಡರೇ ಉತ್ತಮ ಗುಣಮಟ್ಟದ ಬದುಕನ್ನು ಕಟ್ಟಿಕೊಳ್ಳಬಹುದು : ಅಬ್ದುಲ್ ನಾಜೀಮ್

451
firstsuddi

ಬಣಕಲ್ : ಪ್ರತಿಯೊಬ್ಬರು ಉತ್ತಮ ಜೀವನ ಕೌಶಲ್ಯವನ್ನು ರೂಡಿಸಿಕೊಂಡರೇ ಉತ್ತಮ ಗುಣಮಟ್ಟದ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಯುವ ಪರಿವರ್ತಕ ಅಬ್ದುಲ್ ನಾಜೀಮ್ ಹೇಳಿದರುಯುವ ಸಬಲೀಕರಣ ಕ್ರೀಡಾ ಇಲಾಖೆಯ ಯುವ ಸ್ಪಂದನ ಕೇಂದ್ರ ಹಾಗೂ ನಜರತ್ ಶಾಲೆಯ ವತಿಯಿಂದ ನಡೆದ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸೃಜನಾತ್ಮಕ ಯೋಜನೆ ಹಾಗೂ ಜೀವನ ಕೌಶಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದಲ್ಲಿ ಯಶಸ್ಸು ನಮ್ಮದಾಗುತ್ತದೆ. ಉತ್ತಮ ಹವ್ಯಾಸಗಳನ್ನು ಹೊಂದಿದಾಗ ಬದುಕನ್ನು ಮತ್ತಷ್ಟು ಉತ್ಸಾಹದಿಂದ ಬದುಕಲು ಪ್ರೇರಣೆಯಾಗುತ್ತದೆ ಎಂದರು.

ನಜರತ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೋ ಮಾತನಾಡಿ ಬದುಕಿನಲ್ಲಿ ಸಮಯಪಾಲನೆ ಮತ್ತು ಕಾರ್ಯಶ್ರದ್ದೆ ಅತಿಮುಖ್ಯ. ಒಂದು ಗುರಿಯನ್ನು ನಿರ್ದರಿಸಿ ಆ ಗುರಿಯನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಯಶಸ್ಸು ಸಾದ್ಯವಾಗುತ್ತದೆ. ಇದಕ್ಕೆ ಬದ್ದತೆ ಮತ್ತು ಏಕಾಗ್ರತೆ ಮುಖ್ಯವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಹಲಿಮಾ, ಯಾಸ್ಮಿನ್, ಸಾಂಚಿಕ ಮುಂತಾದವರು ಇದ್ದರು.