ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ವೈಮಾನಿಕ ಸಮೀಕ್ಷೆ ನಡೆಸಲಾಯಿತು…

159
firstsuddi

ಭುವನೇಶ್ವರಿ : ಒಡಿಶಾದಲ್ಲಿ ಸಂಭವಿಸಿದ ಭೀಕರ ಫೋನಿ ಚಂಡಮಾರುತದ ಹಿನ್ನೆಲೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವೈಮಾನಿಕ ಸಮೀಕ್ಷೆ ನಡೆಸಿದ್ದು, ಈ ಹಿಂದೆ ಫೋನಿ ಚಂಡಮಾರುತದಿಂದ ಉಂಟಾದ ಹಾನಿಗೆ ಪ್ರಧಾನಿ ನರೇಂದ್ರ ಮೋದಿಯವರು 1ಸಾವಿರ ಕೋಟಿ ಹಣವನ್ನು ಪರಿಹಾರ ನೀಡಿದ್ದರು. ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಹಾಡಿ ಹೊಗಳಿದ್ದು, ನವೀನ್ ಪಟ್ನಾಯಕ್ ಅವರು ಉತ್ತಮ ಕೆಲಸವನ್ನು ಮಾಡಿಸಿದ್ದು, ಅವರ ಜೊತೆ ಕೈಜೋಡಿಸಿದ ರಾಜ್ಯದ ಜನತೆಗೆ ಅಭಿನಂದನೆಗಳು ಎಂದು ಹೇಳಿದ್ದು, ಮತ್ತೆ 1ಸಾವಿರ ಕೋಟಿ ಹಣ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಒಡಿಶಾದ ರಾಜ್ಯಪಾಲ ಗಣೇಶಿ ಲಾಲ್, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಅವರು ಉಪಸ್ಥಿತರಿದ್ದರು.