ನರೇಂದ್ರ ಮೋದಿಯವರ ಚಿಕಿತ್ಸೆಗೆ ಬೇಕಾದ ವಿಶ್ರಾಂತಿಯನ್ನು ದೇಶದ ಮತದಾರರು ಈ ಬಾರಿ ನೀಡುತ್ತಾರೆ : ಸಿದ್ದರಾಮಯ್ಯ…

178
firstsuddi

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ತಮ್ಮ ಟ್ವಿಟರ್ ಮೂಲಕ ವಾಗ್ದಾಳಿ ನಡೆಸಿದ್ದು, ವಿನಾಶಕಾಲೇ ವಿಪರೀತ ಬುದ್ದಿ. ತಾಯಿಯಂತೆಯೇ ಉಗ್ರರಿಗೆ ಬಲಿಯಾದ ರಾಜೀವ್ಜಿ ಬಗ್ಗೆ ನೀಚತನದ ಮಾತನಾಡುತ್ತಿರುವ ನರೇಂದ್ರ ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಗೆ ಬೇಕಾದ ವಿಶ್ರಾಂತಿಯನ್ನು ದೇಶದ ಮತದಾರರು ಈ ಬಾರಿ ನೀಡುತ್ತಾರೆ. ಅವರು ಈ ಕಾಯಿಲೆಯಿಂದ ಶೀಘ್ರ ಗುಣಮುಖರಾಗಲಿ.’ಹಿರಿಯಣ್ಣನ ಚಾಳಿ ಮನೆ ಮಂದಿಗೆಲ್ಲ’. ಸೋಲಿನ ಭೀತಿಯಲ್ಲಿರುವ ನರೇಂದ್ರ ಮೋದಿಯವರಿಂದ ಈಶ್ವರಪ್ಪನವರ ವರೆಗೆ ಎಲ್ಲರ ನಾಲಿಗೆಗಳಲ್ಲಿ ಈ ಹತಾಶೆ ಕಾಣಿಸುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ‘ಮೈ ಚೌಕಿದಾರ್’ ಅಲ್ಲ ‘ಮೈ ಪಾಗಲ್’ ಎಂದು ಬಿಜೆಪಿ ನಾಯಕರೆಲ್ಲ ಘೋಷಿಸಿಕೊಳ್ಳುವುದು ಒಳ್ಳೆಯದು ಎಂದು ಟ್ವೀಟ್ ಮಾಡಿದ್ದಾರೆ.