ಪ್ರಾಣಿಗಳಿಗೂ ವಕ್ಕರಿಸಿದ ಕೊರೊನಾ ; ಇಟಾವಾ ಸಫಾರಿ ಪಾರ್ಕ್ ನ ಎರಡು ಸಿಂಹಗಳಿಗೆ ಕೋವಿಡ್…

110
firstsuddi

ಉತ್ತರಪ್ರದೇಶ : ದೇಶದಾತ್ಯಂತ ಕೊರೊನಾ ಎರಡನೇ ಅಲೆಗೆ ಜನ ತತ್ತರಿಸಿ ಹೋಗುತ್ತಿದ್ದು, ಇದೀಗ ಪ್ರಾಣಿಗಳಿಗೂ ಸೋಂಕು ವಕ್ಕರಿಸಿದೆ. ಇಟಾವಾ ಸಫಾರಿ ಪಾರ್ಕ್ ನ ಎರಡು ಸಿಂಹಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ನಾವು ಸಿಂಹಗಳನ್ನು ಪರೀಕ್ಷೆ ನಡೆಸಿ ಮಾದರಿಯನ್ನು ಬರೇಲಿಯ ಐವಿಆರ್ ಐ ಸಂಸ್ಥೆಗೆ ಕಳುಹಿಸಿದ್ದೆವು. ವರದಿಯಲ್ಲಿ ಎರಡೂ ಸಿಂಹಿಣಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಸದ್ಯ ಸೋಂಕಿತ ಎರಡೂ ಸಿಂಹಗಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗ್ತಿದೆ ಎಂದು ಎಂದು ಸಫಾರಿ ನಿರ್ದೇಶಕ ಕೆ.ಕೆ. ಸಿಂಗ್ ಅವರು ಮಾಹಿತಿ ನೀಡಿದ್ದಾರೆ.

ಇದಕ್ಕೂ ಮುನ್ನ ಹೈದರಾಬಾದ್ ನ ನೆಹರು ಝೂಲಾಜಿಕಲ್ ಪಾರ್ಕ್ ನ 8 ಸಿಂಹಗಳಲ್ಲಿ ಕೂಡ ಕೋವಿಡ್ ಸೋಂಕು ಕಂಡು ಬಂದಿತ್ತು.