ಪ್ರೇಯಸಿಯ ಜೊತೆ ಗಂಡನ ಫೋಟೋ – ನೊಂದ ಪತ್ನಿ ಆತ್ಮಹತ್ಯೆಗೆ ಶರಣು…

51
firstsuddi

ಚಿಕ್ಕಬಳ್ಳಾಪುರ : ಪ್ರೇಯಸಿಯ ಜೊತೆ ತನ್ನ ಪತಿಯ ಫೋಟೋ ನೋಡುತ್ತಿದ್ದಂತೆ ನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಹೆಣ್ಣೂರು ಕದಿರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

22 ವರ್ಷದ ಮೋನಿಕಾ ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿ. ಎಂಟು ತಿಂಗಳ ಹಿಂದೆ ಚಿಕ್ಕಬಳ್ಳಾಪುರ ನಗರದ ನಿವಾಸಿ ಭಾರ್ಗವ್ ಎಂಬಾತನ ಜೊತೆ ಮೋನಿಕಾ ವಿವಾಹವಾಗಿತ್ತು. ಕೆಲ ದಿನಗಳ ಭಾರ್ಗವ್ ಪತ್ನಿ ಮೋನಿಕಾಳನ್ನು ತವರಿಗೆ ಕಳುಹಿಸಿದ್ದ. ಆದರೆ ಬಳಿಕ ವಾಪಸ್ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದಿರಲಿಲ್ಲ. ಅನುಮಾನಗೊಂಡ ಮೋನಿಕಾ ಕರೆದುಕೊಂಡು ಹೋಗುವಂತೆ ಹೇಳಿದಾಗ ಇಲ್ಲಸಲ್ಲದ ಕಾರಣ ಹೇಳುತ್ತಿದ್ದನು.

ಈ ನಡುವೆ ಭಾರ್ಗವ್ ತನ್ನ ಪ್ರೇಯಸಿ ಜೊತೆ ಸುತ್ತಾಡುತ್ತಿರುವ ಫೋಟೊಗಳನ್ನು ಪತ್ನಿ ಮೋನಿಕಾಗೆ ಕಳುಹಿಸಿದ್ದನಂತೆ. ಇದನ್ನು ಕಂಡು ಮನನೊಂದ ಮೋನಿಕಾ ತವರು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಸಾಯುವ ಮುನ್ನ ತನ್ನ ಸಾವಿಗೆ ಗಂಡನೇ ಕಾರಣ ಅಂತ ಡೆತ್ ನೋಟ್ ನಲ್ಲಿ ಮೋನಿಕಾ ಬರೆದಿದ್ದಾಳೆ.

ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.