ಚಿಕ್ಕಮಗಳೂರು:- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮೀನುಗಾರರ ಮೇಲೆ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ಮತ್ತು ಶೋಷಣೆಯನ್ನು ವಿರೋಧಿಸಿ ನಗರದ ಮೀನುಗಾರಿಕೆ ಇಲಾಖೆ ಕಚೇರಿ ಎದುರು ಅನಿರ್ದಿಷ್ಟ ಕಾಲ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕೆ.ಸಿ ವಸಂತಕುಮಾರ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಿನ್ನೆ ನಡೆದ ತಾಲೂಕು ಶ್ರೀಗಂಗಾ ಪ.ಜಾತಿ ಹಾಗೂ ಪ.ವರ್ಗದ ಮೀನುಗಾರಿಕೆ ವಿವಿದೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಪ.ಜಾತಿ ಪವರ್ಗದ ಮೀನುಗಾರರು ಮತ್ತು ಮೇಲ್ವರ್ಗದ ಮೀನುಗಾರರ ನಡುವೆ ತಾರತಮ್ಯ ಮಾಡುತ್ತಿದ್ದಾರೆ. ಸರ್ಕಾರದ ಯಾವುದೇ ಸವಲತ್ತುಗಳನ್ನು ಸಾಲ ಮತ್ತು ಸಬ್ಸಿಡಿಗಳನ್ನು ಕೆಳವರ್ಗದ ಮೀನುಗಾರರಿಗೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಮೀನುಗಾರರಿಗೆ ಮೀನು ಸಾಕಾಣಿಕೆಗೆ ಕೆರೆಗಳನ್ನು ನೀಡುತ್ತಿಲ್ಲ. ಅವರಿಗೆ ಬೇಕಾದವರಿಗೆ ನೀಡುತ್ತಿದ್ದಾರೆ ಇಲ್ಲದ ಸುಳ್ಳುಗಳನ್ನು ಹೇಳಿ ಕೆಳ ವರ್ಗದ ಮೀನುಗಾರರ ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಕೆಳ ವರ್ಗದ ಮೀನುಗಾರರ ಮೇಲೆ ದಿವ್ಯ ನಿರ್ಲಕ್ಷ ತಾಳಿರುವ ಅಧಿಕಾರಿಗಳು ಸಂಘದ ಸರ್ವ ಸದಸ್ಯರ ಸಭೆಗೂ ಬರುತ್ತಿಲ್ಲ ತಾವೇ ಖುದ್ದಾಗಿ ಕಚೇರಿಗೆ ಹೋಗಿ ಕರೆದಿದ್ದರೂ ಸಹ ಸಭೆಗೆ ಹಾಜರಾಗಿಲ್ಲ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀನುಗಾರರಿಗೆ ಸ್ಪಂದಿಸುವಂತೆ ಹಲವು ಬಾರಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ ಅವರು ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಮೀನುಗಾರಿಕೆ ಇಲಾಖೆ, ಕಚೇರಿ ಎದುರು ಅನಿರ್ದಿಷ್ಟ ಕಾಲ ಧರಣ ಆರಂಭಿಸಲಾಗುವುದು ಮೇಲಧಿಕಾರಿಗಳು ಸ್ಥಳಕ್ಕೆ ಬಂದು ಉತ್ತರಿಸುವವರೆಗೂ ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ತಿಳಿಸಿದರು.
ಸಂಘದ ನಿರ್ದೇಶಕ ಜಯರಾಮ್ ಮಾಸ್ಟರ್ ಮಾತನಾಡಿ ಹೇಳವರ್ಗದ ಮೀನುಗಾರರು ತಮ್ಮ ಹಕ್ಕುಗಳನ್ನು ಸವಲತ್ತುಗಳನ್ನು ಪಡೆದುಕೊಳ್ಳಲು ಎಲ್ಲರೂ ಒಗ್ಗೂಡಿ ಸಂಘದಡಿ ಸಾಗಬೇಕು ಎಂದು ಕಿವಿಮಾತೆ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಶ್ರೀ ಗಂಗಾ ಪ.ಜಾತಿ ಪ.ವರ್ಗದ ಮೀನುಗಾರಿಕೆ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಿ. ಧರ್ಮೇಶ್ ಕೆಳ ವರ್ಗದ ಮೀನುಗಾರರನ್ನು ಮತ್ತು ತಮ್ಮ ಸಂಘವನ್ನು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ಕಡೆಗಣಿಸಿರುವುದರಿಂದಾಗಿ ಪ ಜಾತಿ ಪ ವರ್ಗದ ಮೀನುಗಾರರು ಬದುಕಲು ಸಾಧ್ಯವಿಲ್ಲದಂತಾಗಿದೆ ಎಂದು ತಿಳಿಸಿದರು.
ಕೆಲವರಿಗೆ ಮೀನುಗಾರರು ತಮ್ಮ ಬದುಕಿಗಾಗಿ ಹೋರಾಟದಲ್ಲಿ ಸಂಘದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು ಸಂಘದ ನಿರ್ದೇಶಕರಾದ ಮಂಜು ಗಣೇಶ್ ಪಿ.ರಾಮಚಂದ್ರ ರಾಧಮ್ಮ ಕೆಂಚಪ್ಪ ಉಪಸ್ಥಿತರಿದ್ದರು.










