ಫಿಲ್ಮ್ ಚೇಂಬರ್ ಚುನಾವಣೆ : ರಾತ್ರಿ ಹೊರಬೀಳಲಿದೆ ಫಲಿತಾಂಶ…

62
firstsuddi

ಬೆಂಗಳೂರು : ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯುತ್ತಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಚುನಾವಣೆ ಇದಾಗಿದೆ. ಹೀಗಾಗಿ ಈ ಬಾರಿ ಫಿಲ್ಮ್ ಚೇಂಬರ್ ಎಲೆಕ್ಷನ್ ರಂಗೇರಿದೆ.

ಫಿಲ್ಮ್ಸ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಸಾ.ರಾ.ಗೋವಿಂದು ಬಣ ಮತ್ತು ನಿರ್ಮಾಪಕ ಭಾ.ಮಾ.ಹರೀಶ್ ಬಣದ ನಡುವೆ ಸ್ಪರ್ಧೆ ಏರ್ಪಾಡಾಗಿದ್ದು, ಯಾವ ಬಣಕ್ಕೆ ಅಧಿಕಾರ ಸಿಗಲಿದೆ ಎನ್ನುವುದು ರಾತ್ರಿ ಗೊತ್ತಾಗಲಿದೆ.

ಈಗಾಗಲೇ ಸರ್ವಸದಸ್ಯರ ಸಭೆಯು ನಡೆದಿದ್ದು, ಮಧ್ಯಾಹ್ನ 2 ಗಂಟೆಯಿಂದ ಮತದಾನದ ಪ್ರಕ್ರಿಯೆ ಶುರುವಾಗಿದೆ. ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದ್ದು, ಇಂದು ರಾತ್ರಿಯೇ ಫಲಿತಾಂಶ ಕೂಡ ಹೊರಬೀಳಲಿದೆ.