ಫೆಬ್ರವರಿ 1 ರಿಂದ ಮೆಟ್ರೊ ರೈಲು ಪ್ರಯಾಣ ದರ ಏರಿಕೆ ಜಾರಿಗೆ.

29

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ಮುಂಬರುವ ಪ್ರಯಾಣ ದರ ಹೆಚ್ಚಳವನ್ನು ಅತ್ಯಂತ ಗೌಪ್ಯವಾಗಿಟ್ಟಿದ್ದರೂ ಫೆ.1 ರಿಂದ ಬೆಲೆ ಹೆಚ್ಚಳವಾಗಲಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ಖಚಿತಪಡಿಸಿವೆ. ಪ್ರಯಾಣ ದರ ಶೇಕಡ 41 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಈಗ ಮೆಟ್ರೋ ಟೋಕನ್ ಬೆಲೆ ರೂಪಾಯಿ 10 ರಿಂದ 60 ರ ನಡುವೆ ಇದ್ದು, ಮೆಟ್ರೋ ಕಾರ್ಡ್‍ಗಳ ಮೇಲೆ ಶೇಕಡ 5 ರಷ್ಟು ರಿಯಾಯಿತಿ ಇದೆ. ದರ ಪರಿಷ್ಕರಣೆ ಸಮಿತಿ ಮೆಟ್ರೋ ರೈಲ್ವೆ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಯ್ಕೆ 2002ರ ಅಡಿಯಲ್ಲಿ ಶೇಕಡ 41 ರಷ್ಟು ಪ್ರಯಾಣ ಬೆಲೆ ಏರಿಕೆಗೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ದರ ಪರಿಷ್ಕರಿಸಲು ರಚಿಸಲಾದ ಸಮಿತಿಯು ಶೇಕಡ 41 ರಷ್ಟು ಏರಿಕೆಯನ್ನು ಪ್ರಸ್ತಾಪಿಸಿದೆ. ಮೆಟ್ರೋ ರೈಲ್ವೆ ಕಾಯ್ದೆ 2002 ರ ಅಡಿಯಲ್ಲಿ ದರ ನಿಗದಿ ಸಮಿತಿ ಹೊರಡಿಸಿದ ಆದೇಶಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ತನ್ನ ಒಪ್ಪಿಗೆ ನೀಡಿದೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿರುವ ಸಮಿತಿ ಅಧ್ಯಕ್ಷ ಶ್ರೀನಿವಾಸ ಕಟಿಕಿತಾಳ ಅವರು ಒಪ್ಪಿಗೆ ಸೂಚಿಸಿದರೆ ಅದು ಕೇಂದ್ರದಿಂದ ಒಪ್ಪಿಗೆ ಪಡೆದಂತೆ. ಹೀಗಾಗಿ ಬೆಲೆ ಏರಿಕೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ.