ಫೈನಲ್‍ಗೆ ಲಗ್ಗೆಯಿಟ್ಟ ಮುಂಬೈ ಇಂಡಿಯನ್ಸ್…

233
firstsuddi

ಚೆನ್ನೈ : ಪಿ. ಚಿದಂಬರಂ ಕ್ರಿಡಾಂಗಣದಲ್ಲಿ ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್‍ಗಳಿಂದ ಜಯಗಳಿಸಿ ಫೈನಲ್‍ಗೆ ಲಗ್ಗೆ ಇಟ್ಟಿದ್ದು, ಟಾಸ್ ಗೆದ್ದ ಚೆನ್ನೈ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಆರಂಭದಲ್ಲೇ ರನ್ ಗಳಿಸುವಲ್ಲಿ ವಿಫಲವಾಯಿತು. ಆರಂಭಿಕ ಆಟಗಾರರಾದ ಫಾಫ್ ಡು ಪ್ಲೆಸಿಸ್ (6)ಹಾಗೂ ಶೇನ್ ವಾಟ್ಸನ್ (10) ಸುರೇಶ್ ರೈನಾ (5)ರನ್, ಮುರಳಿ ವಿಜಯ್ (26) ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಅಂಬಾಟಿ ರಾಯುಡು ಹಾಗೂ ನಾಯಕ ಮಹೇಂದ್ರ ಸಿಂಗ್ ದೋನಿ ಜೊತೆಯಾಟವಾಡಿ 20ಓವರ್‍ಗಳಲ್ಲಿ 131 ರನ್ ಗಳಿಸಿದರು.
ಬಳಿಕ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ (4) ಕ್ವಿಂಟನ್ ಡಿಕಾಕ್ (8) ರನ್ ಗಳಿಸಿ ಓಟಾದರು. ಬಳಿಕ ಬಂದ ಸೂರ್ಯಕುಮಾರ್ ಯಾದವ್ (71) ಹಾಗೂ ಇಶಾನ್ ಕಿಶಾನ್(28) ರನ್ ಗಳಿಸಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.