ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬರಲು ರಾಜಕೀಯವೇ ಕಾರಣ : ಉಮೇಶ್ ಜಾಧವ್…

205
firstsuddi

ಚಿಂಚೋಳಿ : ಲೋಕಸಭಾ ಚುನಾವಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರ ಮಗಳು ದ್ವಿತೀಯ ಪಿಯುಸಿಯಲ್ಲಿ ಅನುತ್ತೀಣರಾದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್ ಜಾಧವ್ ಅವರು ನನ್ನ ಮಗಳು ದ್ವಿತೀಯ ಪಿಯುಸಿಯಲ್ಲಿ ಫೇಲ್ ಆಗಲು ನಮ್ಮ ಮೇಲಿದ್ದ ರಾಜಕೀಯ ಆರೋಪಗಳೇ ಕಾರಣ. ಹಾಗೆಯೇ ನಾನು ಕಾಂಗ್ರೆಸ್‍ನ್ನು ಬಿಡಲು ಇಂತಹದ್ದೇ ಹಲವು ಕಾರಣಗಳಿದ್ದವು ಎಂದು ಹೇಳಿದ್ದು, ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ನಮ್ಮ ಮೇಲೆ ಮಾಡಿದ ಆರೋಪಗಳಿಂದ ನನ್ನ ಮಗಳಿಗೆ ನೋವಾಗಿದ್ದು ಮಾನಸಿಕವಾಗಿ ಕುಗ್ಗಿದ್ದಳು. ಆಕೆಗೆ ಈ ಆರೋಪಗಳಿಂದ ಪರೀಕ್ಷೆ ಬರೆಯುವ ಮನಸ್ಥಿತಿಯು ಇರಲಿಲ್ಲ. ಕಡಿಮೆ ಅಂಕ ಬರಲು ರಾಜಕೀಯವೇ ಕಾರಣ ಎಂದು ಹೇಳಿದ್ದಾರೆ.