ಬರಗಾಲದ ಸಂದರ್ಭದಲ್ಲೂ ರೈತರ ಸಾಲಮನ್ನಾ ಮಾಡದ ಕಲ್ಲು ಹೃದಯಿ ಪ್ರಧಾನಿ ನಮಗೆ ಬೇಕೇ? : ಡಾ. ಜಿ. ಪರಮೇಶ್ವರ್…

196
firstsuddi

ಬೆಂಗಳೂರು : ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರಧಾನಿ ಮೋದಿ ಅವರ ವಿರುದ್ಧ ತಮ್ಮ ಟ್ವಿಟರ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಕಳೆದ 11 ತಿಂಗಳಿಂದ ರಾಜ್ಯದಲ್ಲಿ ಮೈತ್ರಿ ಪರ್ವ ಯಶಸ್ವಿಯಾಗಿ ಜೋಡೆತ್ತಿನಂತೆ ಸಾಗುತ್ತಿದೆ. ರೈತರು, ಯುವಕರು, ಮಹಿಳೆಯರು – ಹೀಗೆ ಪ್ರತಿಯೊಬ್ಬರ ಸಬಲೀಕರಣಕ್ಕೂ ನಮ್ಮ ಸರಕಾರ ಅತ್ಯುತ್ತಮ ಯೋಜನೆಗಳನ್ನು ರೂಪಿಸಿದೆ. ಬರೀ ಮಾತುಗಾರಿಕೆಯ ಪಕ್ಷವಾದ ಬಿಜೆಪಿಗೆ ಮತ ನೀಡಿದರೆ ಕೇವಲ ಮಾತಷ್ಟೆ ಜನರಿಗೆ ಸಿಗಲಿದೆ. ಈ “ಪ್ರಧಾನ ಸೇವಕ”ರು ನಮ್ಮ ರಾಜ್ಯದ ರೈತರಿಗಾಗಿ ಏನು ಮಾಡಿದ್ದಾರೆ? ಬರಗಾಲದ ಸಂದರ್ಭದಲ್ಲೂ ರೈತರ ಸಾಲಮನ್ನಾ ಮಾಡದ ಕಲ್ಲು ಹೃದಯಿ ಪ್ರಧಾನಿ ನಮಗೆ ಬೇಕೇ? ವರ್ಷಕ್ಕೆ 2 ಕೋಟಿ ಉದ್ಯೋಗ ಎಲ್ಲಿ ಸೃಷ್ಟಿಸಿದ್ದಾರೆ? ಕಪ್ಪುಹಣ ವಾಪಾಸ್ ತರಿಸಿ 15 ಲ. ರೂ. ಖಾತೆಗೆ ಹಾಕುತ್ತೇವೆ ಎಂದು ಹೇಳಿದ್ದರು. ಅದೆಲ್ಲಿದೆ? ಯಾವ ಮಾತನ್ನು ಈಡೇರಿಸದ ಇವರು ಬೇಕೇ? ಎಂದು ಟ್ವೀಟ್ ಮಾಡಿದ್ದಾರೆ.