40 ವರ್ಷಗಳಿಂದ ಕಲಬುರಗಿ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಏನು? : ಬಿ.ಎಸ್. ಯಡಿಯೂರಪ್ಪ…

246
firstsuddi

ಕಲಬುರಗಿ : ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 40 ವರ್ಷಗಳಿಂದ ಕಲಬುರಗಿ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಏನು? ಕಲಬುರಗಿ ಜಿಲ್ಲೆ ಇನ್ನೂ ಹಿಂದುಳಿದ ಭಾಗವಾಗಿ ಉಳಿದಿದೆ. ಜಿಲ್ಲೆಯಲ್ಲಿ ಸಾವಿರಾರು ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಇಎಸ್ಐ ಮೆಡಿಕಲ್ ಹಬ್, ಸೆಂಟ್ರಲ್ ಯುನಿವರ್ಸಿಟಿ, ಏರ್ಪೋಟ್೯ ಯಾರಿಂದ ಮಂಜೂರಾಗಿವೆ ಎಂದು ಖರ್ಗೆಯವರೇ ನೀವು ಆತ್ಮಸಾಕ್ಷಿಯಾಗಿ ಹೇಳಿ ಎಂದು ಪ್ರಶ್ನಿಸಿದ್ದಾರೆ. ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ಜನರು ಉದ್ಯೋಗ ಸಿಗದೇ ಅಲೆದಾಡುತ್ತಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಸೂಕ್ತ ನಾಯಕನನ್ನು ಆಯ್ಕೆ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.