ಮಂಡ್ಯ: ಲೋಕಸಭಾ ಚುನಾವಣಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ನೇತೃತ್ವದಲ್ಲಿ ನಿನ್ನೆ ಆಯೋಜಿಸಿದ್ದ ಸ್ವಾಭಿಮಾನಿ ಸಮ್ಮಿಲನ ಸಮಾವೇಶದ ಭಾಷಣವನ್ನು ಕೇಳಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಟ್ವಿಟರ್ ಮೂಲಕ ಪ್ರತಿಕ್ರಯಿಸಿದ್ದು, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಪರವಾಗಿ ನಡೆದ ಸಮಾವೇಶದ ದಿಗ್ಗಜರ ಭಾಷಣದ ಸಾರಾಂಶವನ್ನು ಗ್ರಹಿಸಿದ್ದೇನೆ. ನನ್ನ ಬಗ್ಗೆ ಮಾಡಿರುವ ವೈಯಕ್ತಿಕ ಆಪಾದನೆಗಳಿಗೆ ಉತ್ತರ ನೀಡುವ ಶಕ್ತಿ ಮಂಡ್ಯ ಜಿಲ್ಲೆಯ ನನ್ನ ಬಾಂಧವರಿಗಿದೆ. ಉತ್ತರ ಕೊಡುವ ರೀತಿಯೂ ಅವರಿಗೆ ಗೊತ್ತಿದೆ. ಅಂಬರೀಷ್ ಹಾಗೂ ನನ್ನ ನಡುವಿನ ಸ್ನೇಹ ಮೂರು ದಶಕಗಳದ್ದು. ಅದು ರಾಜಕಾರಣದ ವ್ಯಾಪ್ತಿಯನ್ನೂ ಮೀರಿದ ಅಪ್ಪಟ ಗೆಳೆತನ.ಈಸ್ನೇಹಕ್ಕೆ ಅವರ ಕುಟುಂಬ ಸೂಕ್ತಕಾಣಿಕೆ ನೀಡಿದೆ.ಮಂಡ್ಯದ ಮಣ್ಣಿನಮೇಲೆ ನಿಂತು ನಾನು ಮಾತನಾಡುತ್ತಿದ್ದೇನೆ.ಪಕ್ಷೇತರ ಅಭ್ಯರ್ಥಿಯ ಪ್ರತಿಯೊಂದು ಮಾತುಕೂಡ ಮಂಡ್ಯದ ಮತದಾರರನ್ನು ಮೋಡಿಮಾಡುವ ತಂತ್ರ ಎಂಬುದರ ನಿಚ್ಚಳಅರಿವು ಮಂಡ್ಯದ ಜನರಿಗಿದೆ.ಇದಕ್ಕಿಂತ ಹೆಚ್ಚುಹೇಳಲು ನಾನು ಇಚ್ಛಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.











