ಬಸ್‍ನಲ್ಲಿಯೇ ಹೃದಯಘಾತ, ನಿರ್ವಾಹಕ ಸಾವು…

111
firstsuddi

ಚಿಕ್ಕಮಗಳೂರು : ಬಸ್ಸಿನಲ್ಲಿಯೇ ನಿರ್ವಾಹಕರೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲಯಮಾರುತ ಬಳಿ ನಡೆದಿದೆ.

ವಿಜಯ್ (43) ಹೃದಯಾಘಾತದಿಂದ ಸಾವನ್ನಪ್ಪಿರುವ ನಿರ್ವಾಹಕ. ಇಂದು ಬೆಳಗ್ಗೆ 6.30ಕ್ಕೆ ಚಿಕ್ಕಮಗಳೂರಿನಿಂದ ಉಡುಪಿ ಕಡೆ ಹೊರಟಿದ್ದ ಬಸ್ ನಲ್ಲಿ ಈ ಘಟನೆ ನಡೆದಿದೆ. ವಿಜಯ್ ಚಿಕ್ಕಮಗಳೂರು-ಉಡುಪಿ ಕೆಎಸ್​ಆರ್​​ಟಿಸಿ ಬಸ್ ನಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.