19 ವರ್ಷದ ಯುವಕನೊಂದಿಗೆ 32 ವರ್ಷದ ಮಹಿಳೆ ಎಸ್ಕೇಪ್!

92
firstsuddi

ಶಿವಮೊಗ್ಗ : 32 ವರ್ಷದ ಮಹಿಳೆ ಜೊತೆ 19 ವರ್ಷದ ಯುವಕ ಓಡಿ ಹೋಗಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಶಿವಮೊಗ್ಗ ತಾಲೂಕಿನ ಮಲ್ಲಿಗೆನಹಳ್ಳಿ ನಿವಾಸಿ ಮಧು(19) ಆಟೋ ಓಡಿಸಿಕೊಂಡಿದ್ದ. ಈತನಿಗೆ ಅದೇ ಮಲ್ಲಿಗೇನಹಳ್ಳಿಯ 32 ವರ್ಷದ ಅರ್ಚನಾ ಎಂಬ ಮಹಿಳೆಯ ಪರಿಚಯವಾಗಿದೆ. ಮಹಿಳೆಯ ಗಂಡ ತೀರಿ ಹೋಗಿದ್ದು, ಜೀವನ ನಡೆಸಲು ಮಲ್ಲಿಗೇನಹಳ್ಳಿಯಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿದ್ದರು. ಮಧು ಅಂಗಡಿಗೆ ಬಂದು ಹೋಗಿ ಮಾಡುವಾಗ ಮಹಿಳೆಯ ಪರಿಚಯವಾಗಿದೆ. ಪರಿಚಯ ಪ್ರಣಯಕ್ಕೆ ತಿರುಗಿದೆ.

ಡಿಸೆಂಬರ್ 10 ರಂದು ಮಧು ಮನೆಯಿಂದ ಆಟೋ ಓಡಿಸಲು ಹೋಗಿದ್ದು, ವಾಪಸ್ ಮನೆಗೆ ಬಾರದೆ ಹೋದಾಗ ಯುವಕನ ತಾಯಿ ಗ್ರಾಮದಲ್ಲಿ ವಿಚಾರಿಸಿದ್ದಾರೆ. ಆಗ ಆತನ ಪ್ರೇಮ ಸಂಬಂಧದ ಬಗ್ಗೆ ಗೊತ್ತಾಗಿದೆ. ಇದೀಗ ಮಧು ತಾಯಿ ಅರ್ಚನಾ ನನ್ನ ಮಗನ ದಾರಿ ತಪ್ಪಿಸಿ ಕರೆದುಕೊಂಡು ಹೋಗಿದ್ದಾಳೆ ಅಂತಾ ಕಿಡ್ಯ್ನಾಪ್ ಪ್ರಕರಣ ದಾಖಲಿಸಿದ್ದು, ತನ್ನ ಮಗನನ್ನು ಹುಡುಕಿ ಕೊಡಿ ಎಂದು ಯುವಕನ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಮಧು ಹಾಗೂ ಅರ್ಚನಾ ತಮಿಳನಾಡಿಗೆ ಹೋಗಿ ಮದುವೆಯಾಗಿರುವುದು ಬೆಳಕಿಗೆ ಬಂದಿದ್ದು, ತನಿಖೆ ಮುಂದುವರಿಸಿದ್ದಾರೆ.