ಬಸ್ ಓವರ್ ಟೇಕ್ ಮಾಡುವ ವೇಳೆ ಬಸ್ ಚಕ್ರಕ್ಕೆ ಸಿಲುಕಿ ಯುವಕ ಸಾವು…

174
firstsuddi

ಗದಗ : ಬಸ್ ಓವರ್ ಟೇಕ್ ಮಾಡಲು ಹೋಗಿ ಬಸ್ ಚಕ್ರಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ ನಗರದ ಮುಳಗುಂದ ನಾಕಾ ಬಳಿ ನಡೆದಿದೆ. ಮೃತ ಯುವಕನನ್ನು ಉಡಚಪ್ಪ ಪೂಜಾರ(25) ಎಂದು ಗುರುತಿಸಲಾಗಿದೆ. ಮೃತ ಯುವಕ ತನ್ನ ಮುಂದೆ ಚಲಿಸುತ್ತಿದ್ದ ಬಸ್ ಅನ್ನು ಓವರ್ ಟೇಕ್ ಮಾಡಲು ವೇಗವಾಗಿ ಬೈಕ್ ಚಲಾಯಿಸುತ್ತಿದ್ದ ವೇಳೆ ಬೈಕ್‍ಗೆ ಕಲ್ಲು ಸಿಕ್ಕಿ ಬೈಕ್ ಸ್ಕಿಡ್ ಆಗಿ ಯುವಕ ಕೆಳಗೆ ಬಿದ್ದಿದ್ದಾನೆ. ಯುವಕ ಕೆಳಗೆ ಬೀಳುತ್ತಿದ್ದಂತೆ ಬಸ್‍ನ ಹಿಂಬದಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಕುರಿತು ಗದಗ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.