ಬಿಜೆಪಿಯವರ ಆಪರೇಷನ್ ಕಮಲದ ಬಗ್ಗೆಯೂ ಸಿಬಿಐ ತನಿಖೆ ನಡೆಯಲಿ : ಮಲ್ಲಿಕಾರ್ಜುನ ಖರ್ಗೆ…

198
firstsuddi

ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಫೋನ್ ಕದ್ದಾಲಿಕೆ ವಿಷಯವನ್ನು ಸಿಬಿಐಗೆ ವಹಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು, ಫೋನ್ ಕದ್ದಾಲಿಕೆ ವಿಷಯವನ್ನು ಸಿಬಿಐಗೆ ವಹಿಸುವುದು ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು, ಫೋನ್ ಕದ್ದಾಲಿಕೆಯನ್ನು ತನಿಖೆ ನಡೆಸುವುದರ ಜೊತೆಗೆ ಬಿಜೆಪಿಯವರ ಆಪರೇಷನ್ ಕಮಲದ ಬಗ್ಗೆಯೂ ತನಿಖೆ ನಡೆಯಲಿ. ಬಿಜೆಪಿಯವರು ಯಾರ ಜೊತೆ ಮಾತನಾಡಿದ್ದಾರೆ ಎನ್ನುವುದು ತನಿಖೆಯಾಗಲಿ. ಆಪರೇಷನ್ ಕಮಲದ ರೂವಾರಿಗಳ ಬಗ್ಗೆಯೂ ತನಿಖೆಯಾಗಲಿ. ಕೇವಲ ರಾಜಾಕೀಯ ಬೆದರಿಕೆಗೆ ಹೀಗೆ ಮಾಡುವುದು ಸರಿಯಲ್ಲ. ಶಾಸಕರನ್ನು ಹೆದರಿಸಿ ಹಿಡಿದಿಟ್ಟುಕೊಳ್ಳುವುದು ಸರಿಯಲ್ಲ. ಟ್ಯಾಪ್‍ನಲ್ಲಿ ಏನೇನು ಮಾತುಕತೆ ಆಗಿದೆ ಹಾಗೂ ಆಪರೇಷನ್ ಕಮಲ ಮಾಡುವಾಗ ಯಾವಾ ರೀತಿಯ ಆಮಿಷ ಒಡ್ಡಲಾಗಿದೆ ಎಂದು ತನಿಖೆಯಿಂದ ಬಯಲಾಗಲಿದೆ. ಕೇವಲ ಫೋನ್ ಕದ್ದಾಲಿಕೆ ವಿಷಯವನ್ನು ಮಾತ್ರ ಸಿಬಿಐಗೆ ವಹಿಸಿದರೆ ಅದು ಏಕಮುಖವಾಗುತ್ತದೆ. ಹೀಗಾಗಿ ತನಿಖೆ ಎಲ್ಲಾ ವಿಚಾರದಲ್ಲೂ ಆಗಬೇಕಾದರೆ ಆಪರೇಷನ್ ಕಮಲವನ್ನೂ ಕೂಡಾ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.