ಬೆಳಗಾವಿ : ಭಾರಿ ಮಳೆಯಿಂದ ಹಾನಿಯಾದ ಸೇತುವೆ ಮೇಲೆ ಚಾಲಕರು ಲಾರಿ ಚಲಾಯಿಸಿದ್ದಕ್ಕೆ ಲಾರಿ ಚಾಲಕನನ್ನು ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ತರಾಟೆಗೆ ತೆಗೆದುಕೊಂಡಿದ್ದು, ಮಳೆಯಿಂದ ಹಾನಿಯಾದ ಸೇತುವೆಯ ಮೇಲೆ ಭಾರಿ ತೂಕದ ವಾಹನ ಸಾಗಾಟ ನಿಷೇಧ ಎಂಬ ಸೂಚನ ಫಲಕವನ್ನು ಗಮನಿಸಿಯೂ ಲಾರಿ ಚಾಲಕ ಸೇತುವೆಯ ಮೇಲೆ ಲಾರಿ ಚಲಾಯಿಸಲು ಮುಂದಾಗಿದ್ದರು. ಈ ವೇಳೆ ಹಾನಿಯಾದ ಸೇತುವೆಯ ಮರು ನಿರ್ಮಾಣಕ್ಕೆ ಯೋಜನೆ ಹಾಕಲೆಂದು ಆಗಮಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಗಮನಿಸಿ ಲಾರಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ದೊಡ್ಡ ಗಾಡಿ ಸಣ್ಣ ಸೇತುವೆಯ ಮೇಲೆ ಬಂದರೆ ಸಣ್ಣ ಪುಟ್ಟ ವಾಹನಗಳು ಹೇಗೆ ತಿರುಗಾಡುತ್ತವೆ. ನೀನು ಒಂದು ದಿನ ಬಂದು ಹೋಗುತ್ತೀಯ ಆದರೆ ಇಲ್ಲಿನ ಜನರು ದಿನ ತೊಂದರೆ ಅನುಭವಿಸಬೇಕಾಗುತ್ತದೆ. ನನ್ನ ಎದುರಲ್ಲೇ ಯೂಟರ್ನ್ ಮಾಡಿಕೊಂಡು ಖಾನಾಪುರದ ಮೇಲೆ ಬೆಳಗಾವಿಗೆ ಹೋಗು ಇಲ್ಲದಿದ್ದರೆ ಚಕ್ರದ ಗಾಳಿಯನ್ನು ತೆಗೆಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.










