ಬಿಜೆಪಿ ಶಾಸಕನ ಕಚೇರಿ ಮೇಲೆ ಕಲ್ಲೆಸೆತ…

68
firstsuddi

ಬೆಳಗಾವಿ : ನಗರದ ಚವ್ಹಾಟ್ ಗಲ್ಲಿಯಲ್ಲಿರುವ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಅವರ ಕಚೇರಿ ಮೇಲೆ ಅಪರಿಚಿತರು ನಿನ್ನೆ ತಡರಾತ್ರಿ ಕಲ್ಲು ಹೊಡೆದು ಪರಾರಿ ಆಗಿದ್ದಾರೆ.

ಶಾಸಕರ ಕಚೇರಿಗೆ ಕಲ್ಲೆಸೆದ ಹಿನ್ನೆಲೆ ಶಾಸಕರ ಕಚೇರಿಯ ಗಾಜುಗಳೆಲ್ಲವೂ ಪುಡಿಪುಡಿ ಆಗಿದೆ. ಇತ್ತ ಶಾಸಕರ ಕಚೇರಿ ಮೇಲೆ ಕಲ್ಲು ತೂರಾಟ ಹಿನ್ನೆಲೆ ಆತಂಕ ವಾತಾವರಣ ನಿರ್ಮಾಣವಾಗಿದೆ. ಪಾನಮತ್ತ ಯುವಕರು ಕಲ್ಲು ತೂರಾಟ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಕಚೇರಿ ಸುತ್ತಲೂ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.