ಬೀದಿನಾಯಿ ದಾಳಿಗೆ 10 ವರ್ಷದ ಬಾಲಕ ಸಾವು…

55
firstsuddi

ಚಿತ್ರದುರ್ಗ: ತಾಲ್ಲೂಕಿನ ಮೆದೇಹಳ್ಳಿ ಗ್ರಾಮದಲ್ಲಿ ಬೀದಿ ನಾಯಿ ದಾಳಿಯಿಂದ 10 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

ತರುಣ್ ಮೃತ ಬಾಲಕ. ಮೆದೇಹಳ್ಳಿಯ ತರುಣ್‌ಗೆ 15 ದಿನಗಳ ಹಿಂದೆ ನಾಯಿ ಕಡಿದಿತ್ತು. ಗಾಯಗೊಂಡಿದ್ದ ತರುಣ್‌ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ತರುಣ್ ಮೃತಪಟ್ಟಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.