ಬುರ್ಖಾ ಧರಿಸಿ ಮಹಿಳೆಯರ ವಾಶ್‌ರೂಮ್‌ಗೆ ನುಗ್ಗಿ ಕ್ಯಾಮೆರಾ ಇರಿಸಿದ ಆರೋಪಿ ಅರೆಸ್ಟ್…

77
firstsuddi

ತಿರುವನಂತನಪುರಂ: ಕೇರಳದ ಜನಪ್ರಿಯ ಲುಲು ಮಾಲ್‌ನಲ್ಲಿ ಬುರ್ಖಾ ಧರಿಸಿ ಮಹಿಳೆಯರ ವಾಶ್‌ರೂಮ್‌ಗೆ ನುಗ್ಗಿ ಕ್ಯಾಮೆರಾ ಇರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ 23 ವರ್ಷದ ಐಟಿ ಉದ್ಯೋಗಿಯಾಗಿದ್ದಾನೆ. ಆರೋಪಿ ಮೊಬೈಲ್ ಫೋನ್‍ನಲ್ಲಿ ವೀಡಿಯೋ ರೆಕಾರ್ಡ್ ಮಾಡಿದ್ದಾನೆ. ಆತನ ವಿರುದ್ಧ ಐಪಿಸಿಯ ಸೆಕ್ಷನ್ 354 (ಸಿ) ಮತ್ತು 419 ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66 ಇ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ತನ್ನ ಫೋನ್ ಅನ್ನು ಸಣ್ಣ ರಟ್ಟಿನ ಪೆಟ್ಟಿಗೆಯಲ್ಲಿ ಇರಿಸಿ, ದೃಶ್ಯಗಳನ್ನು ರೆಕಾರ್ಡ್ ಮಾಡಲು ಕ್ಯಾಮೆರಾ ಬಳಿ ರಂಧ್ರ ಮಾಡಿ ಅದನ್ನು ವಾಶ್ ರೂಂನ ಬಾಗಿಲಿಗೆ ಅಂಟಿಸಿದ್ದ. ನಂತರ, ಶಂಕಿತ ವ್ಯಕ್ತಿ ಅಲ್ಲಿಂದ ಹೊರಬಂದು ವಾಶ್ ರೂಂನ ಮುಖ್ಯ ಬಾಗಿಲಿನ ಮುಂದೆ ನಿಂತಿದ್ದಾನೆ.

ಈ ಹಿನ್ನೆಲೆ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿದ ಮಾಲ್‌ನ ಭದ್ರತಾ ಸಿಬ್ಬಂದಿ ಆತನನ್ನು ವಿಚಾರಿಸಿದ್ದಾರೆ. ಬಳಿಕ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಈ ಹಿಂದೆ ಬೇರೆಲ್ಲಿಯಾದರೂ ಇಂತಹ ಕೃತ್ಯ ಎಸಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.