ಬೂಸ್ಟರ್ ಡೋಸ್ ಕುರಿತು ಟಾಸ್ಕ್​ಫೋರ್ಸ್‌ನಲ್ಲಿ ಚರ್ಚೆ : ಬೊಮ್ಮಾಯಿ.

81
firstsuddi

ಹುಬ್ಬಳ್ಳಿ : ಬೂಸ್ಟರ್ ಡೋಸ್ ಕುರಿತು ಟಾಸ್ಕ್​ಫೋರ್ಸ್‌ನಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಖಾಸಗಿ ಕಾರ್ಯಕ್ರಮ ಹಾಗೂ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಹುಬ್ಬಳ್ಳಿಗೆ ಆಗಮಿಸಿದ್ದೇನೆ. ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ವಿದೇಶದಿಂದ ಬಂದವರ ಮೇಲೆ ಒಂದು ವಾರಗಳ ಕಾಲ ನಿಗಾವಹಿಸಲಾಗುವುದು. ವಿದೇಶ ಹಾಗೂ ಕೇರಳದಿಂದ ಬಂದವರ ಮೇಲೆ ನಿಗಾವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ವಿದೇಶದಿಂದ ಬರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು. ಲಾಕ್​ಡೌನ್ ಮಾಡುವುದಿಲ್ಲ. ಜೊತೆಗೆ ಕ್ರಿಸ್​ಮಸ್  ಹಾಗೂ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕೆಲ ನಿರ್ಬಂಧ ಹೇರುವ ಕುರಿತು ಇನ್ನೂ ತೀರ್ಮಾನ ಮಾಡಿಲ್ಲ ಎಂದರು.

ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ಆರೋಗ್ಯ ಸಚಿವರನ್ನು ಭೇಟಿ ಮಾಡುತ್ತೇನೆ. ಕೋವಿಡ್ ವಾರಿಯರ್ಸ್ಗೆ ಬೂಸ್ಟರ್ ಡೋಸ್ ಕೊಡುವ ಬಗ್ಗೆ ಚರ್ಚೆ ಮಾಡುವೆ. ಈ ಕುರಿತು ಟಾಸ್ಕ್​ಫೋರ್ಸ್‌ನಲ್ಲಿ ಕೂಡ ಚರ್ಚೆ ಮಾಡಲಿದ್ದೇವೆ. ಒಂದು ಡೋಸ್ ಎನ್ಸಿಬಿಎಸ್ಗೆ ಕಳುಹಿಸಲಾಗಿದೆ. ಅದರ ವರದಿ ಬಂದ ನಂತರ ಬೂಸ್ಟರ್ ಡೋಸ್ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದರು.