ಬೆಂಗಳೂರು :ಇನ್ನು ಕಾಂಗ್ರೆಸ್ ಸಮಾವೇಶದಲ್ಲಿ ವೇದಿಕೆ ಮೇಲೆ ಚೇರ್ ಹಾಕಲ್ಲ. ಚೇರ್ ಸಂಸ್ಕೃತಿಗೆ ಅಂತ್ಯ ಹಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಅವರು ಶುಕ್ರವಾರ ನಗರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ನ ಹೊಸ ನಿಯಮ ಒಂದರ ಬಗ್ಗೆ ಮಾತನಾಡಿದ ಶಿವಕುಮಾರ್ ನಾವು ಇನ್ನುಮುಂದೆ ಕಾಂಗ್ರೆಸ್ ಸಮಾವೇಶಗಳಲ್ಲಿ ಸ್ಟೇಜ್ ಮೇಲೆ ಚೇರ್ ಹಾಕಲ್ಲ. ಸ್ಟೇಜ್ ಮೇಲೆ ನಾಯಕರಿಗೆ ಚೇರ್ ಹಾಕಿ ಕೂರಿಸುವ ಸಂಸ್ಕೃತಿಯನ್ನು ನಾವು ಬಿಟ್ಟಿದ್ದೇವೆ. ಹತ್ತು ಜನ ಕಾರ್ಯಕರ್ತರನ್ನು ಕರೆತರದವರೂ ಸ್ಟೇಜ್ ಮೇಲೆ ಕೂರುತ್ತಿದ್ದರು, ಯಾರನ್ನು ನಾವು ಆಹ್ವಾನಿಸಿರುವುದಿಲ್ಲವೋ ಅವರು ವೇದಿಕೆ ಮೇಲೆ ಬಂದು ಕೂರುತ್ತಿದ್ದರು. ಹೀಗಾಗಿ ನಾವು ವೇದಿಕೆ ಮೆಲೆ ಚೇರ್ಹಾಕುವ ಸಂಸ್ಕೃತಿಗೆ ವಿದಾಯ ಹೇಳಿದ್ದೇವೆ, ಈ ಬಗ್ಗೆ ರಾಹುಲ್ ಗಾಂಧಿ ಅವರಿಗೂ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ.










