ಬೆಂಗಳೂರು : ಹಿರಿಯ ಪತ್ರಕರ್ತ ಕೆ.ನಾರಾಯಣ ಸ್ವಾಮಿ ನಿಧನ…

172
First Suddi

ಬೆಂಗಳೂರು: ಹಿರಿಯ ಪತ್ರಕರ್ತ ಕೆ.ನಾರಾಯಣ ಸ್ವಾಮಿ ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.
ಪತ್ರಿಕಾ ರಂಗದಲ್ಲಿ ಕೆಎನ್ಎಸ್ ಎಂದೇ ಚಿರಪರಿಚಿತರಾಗಿದ್ದ ನಾರಾಯಣ ಸ್ವಾಮಿ ಅವರು, ಕೇರಳ ಪಿಟಿಐ ಘಟಕದ ತಿರುವನಂತಪುರ ಶಾಖೆಯ ಮುಖ್ಯಸ್ಥರಾಗಿದ್ದರು. ನಂತರ ಅವರನ್ನು ದಕ್ಷಿಣ ವಿಭಾಗದ ಪ್ರಾಂತೀಯ ಮ್ಯಾನೇಜರ್ ಆಗಿ ನೇಮಕ ಮಾಡಲಾಗಿತ್ತು. ಬಳಿಕ ದೆಹಲಿ ವಿಭಾಗದ ಉಪ ಸಂಪಾದಕರಾಗಿ ಭಡ್ತಿ ಪಡೆದಿದ್ದ ನಾರಾಯಣಸ್ವಾಮಿ ಅವರು ನಿವೃತ್ತರಾಗಿದ್ದರು.
ಕೆ.ನಾರಾಯಣ ಸ್ವಾಮಿ ಅವರು 2 ವಾರದ ಹಿಂದಷ್ಟೇ ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಸೋಂಕಿನಿಂದ ಗುಣಮುಖರಾಗಿದ್ದರು, ಆದರೆ ಅತಿಯಾದ ಔಷಧಿಗಳಿಂದ ಅವರ ಆರೋಗ್ಯ ಕ್ಷೀಣಿಸಿ ಇಂದು ಅವರು ಕೊನೆಯುಸಿರೆಳೆದಿದ್ದಾರೆ.
ನಾರಾಯಣ ಸ್ವಾಮಿ ಅವರ ನಿಧನಕ್ಕೆ ಅವರ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದು, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.