ಬೆಳಗಾವಿಯಲ್ಲಿ ಮಳೆ ಅಬ್ಬರ ; ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ…

89
firstsuddi

ಚಿಕ್ಕೋಡಿ(ಬೆಳಗಾವಿ) : ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಬಾಲಕಿಯೋರ್ವಳು ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಇಂದು ಆಕೆಯ ಶವ ಪತ್ತೆಯಾಗಿದೆ.

ಈ ದುರ್ಘಟನೆ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರದಲ್ಲಿ ನಡೆದಿದ್ದು, ಕಿರಣ ವಿಭೂತಿ (10) ಶವವಾಗಿ ಪತ್ತೆಯಾದ ಬಾಲಕಿ. ಭಾರೀ ಮಳೆಗೆ ರಾಮನಗರದ ಹಳ್ಳ ತುಂಬಿ ಹರಿದಿದ್ದು, ನಿನ್ನೆ ಸಂಜೆ ಈ ನೀರಿನಲ್ಲಿ ಬಾಲಕಿ ಕೊಚ್ಚಿ ಹೋಗಿದ್ದಳು. ಇಂದು ಎಸ್ ಡಿಆರ್ ಎಫ್ ತಂಡ ಕಾರ್ಯಚರಣೆ ನಡೆಸಿ ಬಾಲಕಿಯ ಶವವನ್ನು ಹೊರತೆಗೆದಿದ್ದು. ಬಾಲಕಿಯ ಶವ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.