ಬೆಳಗಾವಿ : ಜಮೀನಿನಲ್ಲಿ ವಿಚಿತ್ರ ಎಲೆಕ್ಟ್ರಾನಿಕ್ ಬಲೂನ್ ಪತ್ತೆ…

56
firstsuddi

ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕರಿವಿನಕೊಪ್ಪ ಗ್ರಾಮದ ಜಮೀನಿನಲ್ಲಿ ವಿಚಿತ್ರವಾದ ಎಲೆಕ್ಟ್ರಾನಿಕ್ ಬಲೂನ್ ಪತ್ತೆಯಾಗಿದ್ದು, ಇದರಿಂದ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದೆ.

ಜಮೀನಿನಲ್ಲಿ ಬಿದ್ದ ದೊಡ್ಡ ಬಿಳಿ ಬಣ್ಣದ ಬಲೂನ್ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬೈಲಹೊಂಗಲ ಪೊಲೀಸರು ಪರಿಶೀಲನೆ ನಡೆಸಿ ವಿಚಿತ್ರ ಬಲೂನ್ ವಶಕ್ಕೆ ಪಡೆದಿದ್ದಾರೆ.

ಬಲೂನ್ ಎಲ್ಲಿಂದ ಬಂತು, ಯಾವಾಗ ಹಾರಿ ಬಂತು, ಅದರಲ್ಲಿ ಸಿಕ್ಕ ಎಲೆಕ್ಟ್ರಿಕ್ ಡಿವೈಸ್​ಗಳಾವುವು, ಅವು ಹೇಗೆ ಕೆಲಸ ಮಾಡುತ್ತವೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.