ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ಉಗುಳುತ್ತಿದ್ದ 133 ಜನರಿಗೆ 13,330 ರೂ. ದಂಡ…

323
firstsuddi

ಬೆಳಗಾವಿ: ಕೋವಿಡ್–19 ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಜಿಲ್ಲಾ ಪೊಲೀಸರು, ಮಾಸ್ಕ್(ಮುಖಗವಸು) ಹಾಕಿಕೊಳ್ಳದೆ ಸಂಚರಿಸುತ್ತಿದ್ದ 420 ಮಂದಿಗೆ 42 ಸಾವಿರ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಹೆಚ್ಚಿನ (165) ಮಂದಿಗೆ ದಂಡ ವಿಧಿಸಲಾಗಿದೆ.‘ಸಾರ್ವಜನಿಕ ಸ್ಥಳದಲ್ಲಿ ಕಂಡಲ್ಲಿ ಉಗುಳುತ್ತಿದ್ದ 133 ಜನರಿಗೆ 13,330 ರೂ. ದಂಡ ವಿಧಿಸಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ‘ಲಾಕ್ಡೌನ್ ಜಾರಿಯಾದಾಗಿನಿಂದ ಉಲ್ಲಂಘನೆಗೆ ಸಂಬಂಧಿಸಿದಂತೆ 162 ಪ್ರಕರಣ ದಾಖಲಿಸಲಾಗಿದೆ. 280 ಮಂದಿ ಬಂಧಿಸಲಾಗಿದೆ ಹಾಗೂ 1,905 ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.