ಮೂಡಿಗೆರೆ: ಇಡೀ ವಿಶ್ವವೇ ಕೊರೊನಾ ಎಂಬ ಮಹಾಮಾರಿಯ ಹೊಡೆತಕ್ಕೆ ಸಿಲುಕಿದ್ದು ಇದರಿಂದ ಪಾರಾಗುವುದರೊಂದಿಗೆ ಲೋಕದ ಸಮಸ್ತ ಜನರಿಗೆ ಒಳಿತು ಮಾಡುವಂತೆ ಮೂಡಿಗೆರೆ ತಾಲ್ಲೂಕಿನ ಕುಂದೂರು ಗ್ರಾಮದ ರಾಮೇಶ್ವರ ದೇವಾಲಯದ ಶರಶ್ಚಂದ್ರ ಅವರ ನೇತೃತ್ವದಲ್ಲಿ ರುದ್ರಯಾಗ ನಡೆಸಲಾಯಿತು. ದೇವಾಲಯದ ಅರ್ಚಕರದ ಶಂಕರನಾರಾಯಣ ಭಟ್ ಮತ್ತು ನಾರಾಯಣ ಭಟ್ಟರು ಯಾಗದಲ್ಲಿ ಪಾಲ್ಗೊಂಡಿದ್ದರು.










