ಬೈಕ್​​ಗೆ ಹಿಂಬದಿಯಿಂದ ಕಂಟೈನರ್ ಡಿಕ್ಕಿ ; ಇಬ್ಬರು ಸಾವು…

88
firstsuddi

ಬೆಂಗಳೂರು: ಬೈಕ್​​ಗೆ ಹಿಂಬದಿಯಿಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟ ಸಮೀಪದ ಕೆಂಪನಾಯಕನಹಳ್ಳಿ ಅಕ್ವೇರಲ್ ಗಾರ್ಮೆಂಟ್ಸ್ ಬಳಿ ನಿನ್ನೆ ಸಂಜೆ ನಡೆದಿದೆ.

ಎಎಂಸಿ ಕಾಲೇಜಿನ ಬಿಎಂಹೆಚ್ ವಿದ್ಯಾರ್ಥಿ ಕೌಶಿಕ್ ಹಾಗು ಸುಷ್ಮಾ ಮೃತ ದುರ್ದೈವಿಗಳು. ಮೃತರಿಬ್ಬರು ನಗರದ ಸಾರಕ್ಕಿ ನಿವಾಸಿಗಳು. ಬನ್ನೇರುಘಟಕ್ಕೆ ಊಟಕ್ಕೆಂದು ಹೋಗಿದ್ದರು. ಊಟ ಮುಗಿಸಿ ವಾಪಸ್ ಬರುವ ವೇಳೆ ಕಂಟೈನರ್ ಲಾರಿಯೊಂದು ಹಿಂಬದಿಯಿಂದ ಬೈಕ್​​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಅಪಘಾತ ನಂತರ ಕಂಟೈನರ್ ಚಾಲಕ ಪರಾರಿಯಾಗಿದ್ದು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.